Thursday, June 4, 2026
Homeಕರಾವಳಿಉಡುಪಿಅಜೆಕಾರು: ನೋಂದಣಿ ಇಲ್ಲದ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ, 3 ಜಾನುವಾರುಗಳ ರಕ್ಷಣೆ

ಅಜೆಕಾರು: ನೋಂದಣಿ ಇಲ್ಲದ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ, 3 ಜಾನುವಾರುಗಳ ರಕ್ಷಣೆ

- Advertisement -
- Advertisement -

ಅಜೆಕಾರು: ಮೂರು ಜಾನುವಾರುಗಳನ್ನು ನೋಂದಣಿ ಇಲ್ಲದ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದದನ್ನು ತಡೆದ ಪೊಲೀಸರು ರಕ್ಷಿಸಿದ್ದಾರೆ.

ಅಜೆಕಾರು ಪೊಲೀಸ್ ಠಾಣೆಯ ಪಿ.ಎಸ್.ಐ ಸುದರ್ಶನ ದೊಡ ಮನಿರರು ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸರಕು ಸಾಗಾಣಿಕ ಟೆಂಪೋವನ್ನು ಪರಿಶೀಲನೆ ನಡೆಸಲು ಮುಂದಾದಾಗ ಚಾಲಕನು ಟೆಂಪೋವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಪೊಲೀಸರು ಕೂಡ ಟೆಂಪೋವನ್ನು ಬೆನ್ನಟ್ಟಿದಾಗ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿಯ ಟೆಂಪೋವನ್ನು ನಿಲ್ಲಿಸಿ ಚಾಲಕ ಪರಾಗಿಯಾಗಿದ್ದಾನೆ.

ಈ ವೇಳೆ ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ನೋಂದಣಿ ಸಂಖ್ಯೆ ಇಲ್ಲದಿರುವುದು ಕಂಡು ಬಂದಿದ್ದು , ವಾಹನದಲ್ಲಿ 20,000 ರೂ.ಮೌಲ್ಯದ 3 ಜಾನುವಾರುಗಳು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿದೆ . ಆರೋಪಿಯು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!