Friday, June 5, 2026
Homeಕರಾವಳಿಮಂಗಳೂರು: ನಿಸರ್ಗ ಬಾರ್ ಗೆ ಪೋಲೀಸರ ದಾಳಿ, 50 ಪೆಟ್ಟಿಗೆ ಅಕ್ರಮ ಮದ್ಯ ವಶ

ಮಂಗಳೂರು: ನಿಸರ್ಗ ಬಾರ್ ಗೆ ಪೋಲೀಸರ ದಾಳಿ, 50 ಪೆಟ್ಟಿಗೆ ಅಕ್ರಮ ಮದ್ಯ ವಶ

- Advertisement -
- Advertisement -

ಮಂಗಳೂರು: ನಗರ ಹೊರವಲಯದ ತಲಪಾಡಿ ಚೆಕ್‌ಪೋಸ್ಟ್ ಬಳಿಯ ನಿಸರ್ಗ ಬಾರ್ ಆಯಂಡ್ ರೆಸ್ಟೋರೆಂಟ್‌ಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಬಾರ್ ಕ್ಯಾಷಿಯರ್ ಆಗಿದ್ದ ಮಡಿಕೇರಿ ಮೂಲದ ಚರಣ್(22 ಬಂಧಿತ ಆರೋಪಿಯಾಗಿದ್ದಾನೆ.

1.53 ಲಕ್ಷ ಮೌಲ್ಯದ ಮದ್ಯವನ್ನು ತೊಕೊಟ್ಟಿನ ಹೈಸ್ಪಿರಿಟ್ ವೈನ್ಸ್ ಬಾರ್ ನಿಂದ ತರಲಾಗಿದ್ದು, ಮಾನ್ಯತೆ ಹೊಂದಿರುವ ಬಿಲ್ ಗಳಿಲ್ಲದೇ ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಸಂಗ್ರಿಸಿಡಲಾಗಿತ್ತು. ಈ ಮದ್ಯವನ್ನು ಕೇರಳಕ್ಕೆ ಸಾಗಿಸಲು ಸಂಗ್ರಿಹಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್​ ನ ಮಾಲೀಕ ದಿವ್ಯರಾಜ್ ಶೆಟ್ಟಿ ಹಾಗೂ ತೊಕ್ಕೊಟ್ಟು ಹೈಸ್ಪಿರಿಟ್ ವೈನ್ಸ್ ಬಾರ್​ ನ ಮಾಲೀಕ ರೋಹಿತ್ ಅವರ ಮೇಲೆ ಕೂಡಾ ಪ್ರಕರಣ ದಾಖಲಿಸಲಾಗಿದೆ. ಆದಷ್ಟು ಬೇಗ ಅವರುಗಳನ್ನೂ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!