Friday, May 3, 2024
Homeಕರಾವಳಿಸಮಸ್ತ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ: ಆತೂರು ರೇಂಜ್ ನಲ್ಲಿ ಆತೂರುಬೈಲು ಪ್ರಥಮ

ಸಮಸ್ತ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ: ಆತೂರು ರೇಂಜ್ ನಲ್ಲಿ ಆತೂರುಬೈಲು ಪ್ರಥಮ

spot_img
- Advertisement -
- Advertisement -

ಕಡಬ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಎಪ್ರಿಲ್ ಮೊದಲ ವಾರ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರುಬೈಲು ಮದ್ರಸಕ್ಕೆ ಶೇಕಡಾ 100 ಫಲಿತಾಂಶ ದೊರೆತಿದೆ.

ಆತೂರು ರೇಂಜ್ ಮಟ್ಟದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ಸರೀನಾ ಆತೂರುಬೈಲು ಪ್ರಥಮ ಹಾಗೂ ಮುಝೈನಾ ಆತೂರುಬೈಲು ದ್ವಿತೀಯ ಸ್ಥಾನ ಪಡೆದು ಮದ್ರಸದ ಕೀರ್ತಿ ಹೆಚ್ಚಿಸಿದ್ದಾರೆ.

ಏಳು ಮತ್ತು ಐದನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ನೂರು ಶೇಕಡಾ ಫಲಿತಾಂಶ ಲಭಿಸಿದೆ ಎಂದು ಮದ್ರಸ ಸದರ್ ಉಸ್ತಾದರಾದ ಇಬ್ರಾಹಿಂ ಕೌಸರಿ ಮುಂಡೋಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!