Wednesday, July 22, 2026
Homeಕರಾವಳಿಮಂಗಳೂರಿನಲ್ಲಿ ಪತ್ತೆಯಾತ್ತು ರಾಶಿ ರಾಶಿ ಕೊರೊನಾ ಮೀನು: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಮಂಗಳೂರಿನಲ್ಲಿ ಪತ್ತೆಯಾತ್ತು ರಾಶಿ ರಾಶಿ ಕೊರೊನಾ ಮೀನು: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

- Advertisement -
- Advertisement -

ಮಂಗಳೂರು:  ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಆರ್ಭಟ ಜೋರಾಗಿದೆ. ದಿನೇ ದಿನೇ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗಲೇ  ಮಂಗಳೂರಿನಲ್ಲಿ ಅಚ್ಚರಿಯ ಘಟನೆ ನಡೆದಿದೆ.

ಹೌದು.. ಮಂಗಳೂರಿನಲ್ಲೀಗ ಕೊರೊನಾ ಮೀನು ಭಾರಿ ಸದ್ದು ಮಾಡುತ್ತಿದೆ. ಮಂಗಳೂರಿನ ಮೀನು ದಕ್ಕೆ ಬಂದರಿಗೆ ಕೊರೊನಾ ಮೀನು ಬಂದಿರುವುದಾಗಿ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.  ನಮ್ಮ ಕರಾವಳಿ ಪ್ರದೇಶದಲ್ಲಿ  ಈ ವರೆಗೂ ಕಾಣದ ಮೀನಿನ ತಳಿಯೊಂದು ಆಳ ಕಡಲ ಮೀನುಗಾರಿಕೆ ಬೋಟ್ ಗಳ ಮೂಲಕ ದಡ‌‌ ಸೇರಿದೆ.

ಈ ಮೀನು ಕಾಣಲು ಕೊರೊನಾ ವೈರಸ್ ನ  ಆಕಾರದಂತೆಯೇ ಇದ್ದು, ಮೈತುಂಬಾ ಮುಳ್ಳಿನಂತಹ ಪದರವಿದೆ. ಆದ್ದರಿಂದ ಇದನ್ನು ಕೊರೊನಾ ಮೀನು ಎಂದು ಸ್ಥಳೀಯ ಮೀನುಗಾರರು, ವ್ಯಾಪಾರಸ್ಥರು ಕರೆಯುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

- Advertisement -

Latest News

error: Content is protected !!