Saturday, May 4, 2024
Homeಕರಾವಳಿಕೊರೊನಾ ಗೆಲ್ಲಲು ಮಂಗಳೂರು ಪೊಲೀಸರು ಮಾಡಿದ ಉಪಾಯ ಹೇಗಿದೆ ನೋಡಿ...

ಕೊರೊನಾ ಗೆಲ್ಲಲು ಮಂಗಳೂರು ಪೊಲೀಸರು ಮಾಡಿದ ಉಪಾಯ ಹೇಗಿದೆ ನೋಡಿ…

spot_img
- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರೋದರಿಂದ ಪೊಲೀಸರು ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದರೆ. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುವ ಪೊಲೀಸರಿಗೆ ಎಷ್ಟೇ ಸಂದರ್ಭದಲ್ಲಿ ಜೀವ ಭದ್ರತೆಯೇ ಇರೋದಿಲ್ಲ. ಅದರಲ್ಲೂ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಅವರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಆದ್ರೆ ಮಂಗಳೂರಿನ ಬರ್ಕೆ ಠಾಣೆಯ ಪೊಲೀಸರೊಂದು ಕೊರೊನಾ ವಿರುದ್ಧ ಹೋರಾಡೋದಕ್ಕೆ ವಿನೂತನ ಐಡಿಯಾ ಒಂದನ್ನು ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಆರೋಗ್ಯಕರ ಸ್ಟೀಮ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಹೊರಗಡೆಗೆ ಡ್ಯೂಟಿಗೆ ಹೋಗುವ ಮುನ್ನ ಹಾಗೇ ಡ್ಯೂಟಿ ಮುಗಿಸಿ ಠಾಣೆಗೆ ಬಂದ ಕೂಡಲೇ ಇಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸೂಪರ್ ವ್ಯವಸ್ಥೆಯೊಂದನ್ನು ಮಾಡಿದ್ದಾರೆ. ಪೊಲೀಸರ ಈ ಪ್ಲ್ಯಾನ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!