Saturday, June 6, 2026
Homeತಾಜಾ ಸುದ್ದಿರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ತಪ್ಪದ ಸಂಕಷ್ಟ; ಡಿ ಬಾಸ್ ರನ್ನು ಎ1...

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ತಪ್ಪದ ಸಂಕಷ್ಟ; ಡಿ ಬಾಸ್ ರನ್ನು ಎ1 ಆರೋಪಿಯನ್ನಾಗಿಸಲು ಪೊಲೀಸರು ಸಿದ್ಧತೆ?

- Advertisement -
- Advertisement -

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಡಿ ಬಾಸ್ ದರ್ಶನ್ ಅವರಿಗೆ ಒಂದಿಲ್ಲೊಂದು ಸಂಕಷ್ಟ ತಪ್ಪುತ್ತಲೇ ಇಲ್ಲ. ಇದೆಲ್ಲವನ್ನು ನೋಡ್ತಿದ್ರೆ ದರ್ಶನ್ ಗೆ ಜೈಲೇ ಫಿಕ್ಸಾಅನ್ನೋ ಅನುಮಾನ ಮೂಡುತ್ತೆ.

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು A2 ಆರೋಪಿಯಿಂದ A1 ಆರೋಪಿಯನ್ನಾಗಿ ಮಾಡಲು ಇದೀಗ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹೌದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಅವರು ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಒಂದು ಪ್ರಕರಣದಲ್ಲಿ ಪವಿತ್ರ ಗೌಡಾಳನ್ನು A1 ಆರೋಪಿನ್ನಾಗಿ ಮಾಡಲಾಗಿದ್ದು, ದರ್ಶನ ಅವರನ್ನು A2 ಆರೋಪಿನ್ನಾಗಿಸಿ ಪ್ರಕರಣ ದಾಖಲಾಗಿತ್ತು.

ಇದೀಗ ನಟ ದರ್ಶನ್ ಅವರನ್ನು A2 ನಿಂದ A1 ಆರೋಪಿಯನ್ನಾಗಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ವೇಳೆ ನಟ ದರ್ಶನ ಅವರನ್ನು A2 ಆರೋಪಿಯನ್ನಾಗಿ ಮಾಡಲಾಗಿತ್ತು. ಅಲ್ಲದೆ ಪವಿತ್ರ ಗೌಡರನ್ನು ಮೊದಲ ಆರೋಪಿ ಮಾಡಲಾಗಿತ್ತು. ಹಾಗಾಗಿ ಇದೀಗ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

- Advertisement -

Latest News

error: Content is protected !!