- Advertisement -
![]()
- Advertisement -
ಮಂಗಳೂರು : ಔಷಧಿಯೆಂದು ಗ್ರಹಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿಧನರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಾಕ್ರಬೈಲ್ ಮಂಜುನಾಥ್ ಹೆಗ್ಡೆ ಮೃತ ದುರ್ದೈವಿ.
ಇವರು ಕೆಲ ವರ್ಷಗಳ ಹಿಂದೆ ಅಪಘಾತಕ್ಕೀಡಾಗಿದ್ದರು. ಹಾಗಾಗಿ ಆಯುರ್ವೇದಿಕ್ ಔಷಧಿ ಸೇವಿಸುತ್ತಿದ್ದರು.ಅದೇ ಔಷಧಿ ಎಂದು ತಪ್ಪಾಗಿ ಗ್ರಹಿಸಿ ಇಲಿಪಾಷಾಣ ಸೇವಿಸಿ ಅವರು ಗಂಭೀರ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೃತರು ಹೆಂಡತಿ, ಮಕ್ಕಳನ್ನು ಇವರು ಅಗಲಿದ್ದಾರೆ.
- Advertisement -


