Wednesday, June 3, 2026
Homeಕರಾವಳಿಮಂಗಳೂರುʼಸಾಹಿತ್ಯ ಸಂಭ್ರಮ- 2ʼ ಮತ್ತು ʼಕಾವ್ಯಾಂ ವ್ಹಾಳೊ-5ʼ ಕೊಂಕಣಿ ಕವಿಗೋಷ್ಟಿ

ʼಸಾಹಿತ್ಯ ಸಂಭ್ರಮ- 2ʼ ಮತ್ತು ʼಕಾವ್ಯಾಂ ವ್ಹಾಳೊ-5ʼ ಕೊಂಕಣಿ ಕವಿಗೋಷ್ಟಿ

- Advertisement -
- Advertisement -

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಹಿರಿಯ ಸಾಹಿತಿ ಶ್ರೀ ಜೋರ್ಜ್‌ ಕ್ಯಾಸ್ತೆಲಿನೊ, ನಕ್ರೆ, ಕಾರ್ಕಳ ಇವರ  ವಸತಿ ಗೃಹದ ಅಂಗಳದಲ್ಲಿ ದಿನಾಂಕ 03.08.2025ರಂದು ʼಸಾಹಿತ್ಯ ಸಂಭ್ರಮ-2ʼ ಮತ್ತು ʼಕಾವ್ಯಾಂ ವ್ಹಾಳೊ-5ʼ ಶೀರ್ಷಿಕೆಯಡಿ ಸಾಹಿತ್ಯಗೋಷ್ಟಿ ಮತ್ತು ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾರ್ಕಳದ ಹಿರಿಯ ಸಾಹಿತಿಗಳಾದ ಶ್ರೀನಾರಾಯಣ ಎಸ್‌ ಗವಾಳ್ಕರ್‌ರವರನ್ನು ಸನ್ಮಾನಿಸಲಾಗುವುದು. ನಕ್ರೆ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ. ಸ್ವಾಮಿ ಲುವಿಸ್‌ ಡೆಸಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಮುಖ್ಯ ಶಿಕ್ಷಕರಾದ ಶ್ರೀ ಜೋರ್ಜ್‌ ಕ್ಯಾಸ್ತೆಲಿನೊರವರೊದಿಗೆ ಯುವ ಸಾಹಿತಿ ಶ್ರೀ ಎಲ್ಸನ್‌ ಹಿರ್ಗಾನ್‌ರವರು ಸಂವಾದವನ್ನು ನಡೆಸಲಿರುವರು. ಶ್ರೀಮತಿ ಲವೀಟಾ ಡಿಸೋಜ ನಕ್ರೆ ಇವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿರುವರು.

ಶ್ರೀ ರಾಮಚಂದ್ರ ಪೈ, ಶ್ರೀಮತಿ ಪ್ರಮೀಳಾ ಪ್ಲಾವಿಯಾ, ಶ್ರೀ ರಾಘವೇಂದ್ರ ಪ್ರಭು ಕರ್ವಾಲು, ಶ್ರೀ ಒಸ್ವಾಲ್ಡ್‌ ಮರಿಯನ್‌ ಡಿಸೋಜ, ಡಾ| ಸುಮತಿ ಪಿ, ಶ್ರೀ ಪ್ರಕಾಶ್‌ ಮಾರ್ಟಿಸ್‌, ಶ್ರೀ ಕಾಂತರವ ಶಿವಾನಂದ ಶೆಣೈ, ಶ್ರೀ ರಾಬರ್ಟ್ ಮಿನೇಜಸ್, ಶ್ರೀಮತಿ ಸೀಮಾ ಕಾಮತ್‌, ಶ್ರೀ ಪ್ರಕಾಶ್‌ ಡಿಸೋಜ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

- Advertisement -

Latest News

error: Content is protected !!