Monday, April 29, 2024
Homeಕರಾವಳಿಬಂಟ್ವಾಳ: ಯುವ ವಕೀಲರ ಮೇಲೆ ಪೊಲೀಸರ ದೌರ್ಜನ್ಯ: ಹಲ್ಲೆ ನಡೆಸಿದ ಪೊಲೀಸರ ಅಮಾನತಿಗೆ ವಕೀಲರ ಸಂಘದ...

ಬಂಟ್ವಾಳ: ಯುವ ವಕೀಲರ ಮೇಲೆ ಪೊಲೀಸರ ದೌರ್ಜನ್ಯ: ಹಲ್ಲೆ ನಡೆಸಿದ ಪೊಲೀಸರ ಅಮಾನತಿಗೆ ವಕೀಲರ ಸಂಘದ ಆಗ್ರಹ

spot_img
- Advertisement -
- Advertisement -

ಮಂಗಳೂರು: ವಕೀಲರ ದಿನಾಚರಣೆಯಂದೇ ಮಂಗಳೂರು ವಕೀಲರ ಸಂಘದ ಸದಸ್ಯ, ಯುವ ವಕೀಲ ಕುಲ್ ದೀಪ್ ಶೆಟ್ಟಿಯವರ ಮೇಲೆ ಪುಂಜಾಲ್ ಕಟ್ಟೆ ಪೊಲೀಸರು ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದು,ಈ ಘಟನೆಯನ್ನು ವಕೀಲರ ಸಂಘ( ರಿ), ಬಂಟ್ವಾಳ ತೀವ್ರವಾಗಿ ಖಂಡಿಸಿದೆ.

ಪೋಲೀಸರಿಂದ ಹಲ್ಲೆಗೊಳಗಾದ ಯುವ ವಕೀಲರಾದ ಕುಲ್ ದೀಪ್ ಶೆಟ್ಟಿಯವರು ತಮ್ಮ ಜಾಗದ ತಕರಾರಿನ ಬಗ್ಗೆ ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡಯಾಜ್ಞೆ ಪಡೆದುಕೊಂಡಿದ್ದು, ಆದರೆ ಪ್ರತಿವಾದಿಗಳು ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ದೂರು ನೀಡಿಡಲಾಗಿತ್ತು.

ಸದ್ರಿ ದೂರನ್ನು ಸ್ವೀಕರಿಸದೆ, ಪೊಲೀಸರು, ಎದುರುದಾರರ ಮತ್ತು ರಾಜಕೀಯ ಪ್ರೇರಿತರಾಗಿ ರಾತ್ರೋರಾತ್ರಿ ಕುಲ್ ದೀಪ್ ಶೆಟ್ಟಿ ಅವರ ಮನೆಗೆ ಬಂದು ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೌರ್ಜನ್ಯ ಎಸಗಿರುದ್ದಾರೆ. ಹಲ್ಲೆಗೊಳಗಾದ ವಕೀಲರ ವಿರುದ್ಧ ಕ್ರೈಮ್ 94/2022ರಂತೆ FIR ಸಲ್ಲಿಸಿದ್ದು ಐಪಿಸಿ ಸೆಕ್ಷನ್ 379,447 ರಂತೆ ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಜಿಲ್ಲಾಧ್ಯಕ್ಷರು ಅದ S. P. ಚಂಗಪ್ಪ ಅವರು ಕುಲ್ ದೀಪ್ ಶೆಟ್ಟಿ ಅವರ ಪರ ವಾದ ಮಂಡಿಸಿ ಮಧ್ಯಂತರ ಜಾಮೀನಿನಲ್ಲಿ ಯುವ ವಕೀಲ ಕುಲ್ ದೀಪ್ ಶೆಟ್ಟಿಯವರನ್ನು ಬಿಡುಗಡೆಗೊಳಿಸಿದರು.

ಮತ್ತು ಪೊಲೀಸರು ಬಂಧನದ ಸಂದರ್ಭದಲ್ಲಿ ವಕೀಲರಿಗೆ ಹಲ್ಲೆ ನಡೆಸಿರುವುದನ್ನು ತನಿಖೆ ಮಾಡುವಂತೆ ಮೇಲಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಮನೋರಾಜ್, ಉದಯಾನಂದ, ವರದರಾಜ್, ಪುತ್ತೂರು ವಕೀಲರಾದ ಪ್ರಸಾದ್, ಸುರಕ್ಷಿತ್, ಅರುಣ್ ಗಣಪತಿ ಯವರು ಹಲ್ಲೆಗೊಳಗಾದ ವಕೀಲರ ಪರ ವಾದಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಬಂಟ್ವಾಳದ ಎಲ್ಲಾ ವಕೀಲರು ಹಾಜರಿದ್ದು, ನೈತಿಕ ಬೆಂಬಲ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಜಿಲ್ಲಾಧ್ಯಕ್ಷರು ಆದ S. P. ಚಂಗಪ್ಪ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಾ, ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯoತ ತೀವ್ರ ಹೋರಾಟ ನಡೆಸುವುದಾಗಿ ಕರೆ ನೀಡಿದರು.

- Advertisement -
spot_img

Latest News

error: Content is protected !!