ವಿಟ್ಲ; ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬದಿಂದ ಹಣ ಕದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ತ್ವಾಹಿದ್ (19), ಉಮ್ಮರ್ ಫಾರೂಕ್ (18), ಮೊಹಮ್ಮದ್ ನಬೀಲ್ (18) ಬಂಧಿತರು.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತ ಬೆಟ್ಟುವಿನ ಡಿ.ನಾರಾಯಣ ರಾವ್ ಎಂಬವರು ಅಧ್ಯಕ್ಷರಾಗಿದ್ದ ಧಾರ್ಮಿಕ ಶ್ರಧ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತ ಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಲಾಗಿತ್ತು. ಆ ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆಯಲು .ನಾರಾಯಣ ರಾವ್ ಅವರು ದಿನಾಂಕ:26-07-2025 ರಂದು ಆ ಸ್ಥಳಗಳಿಗೆ ತೆರಳಿದಾಗ, ಯಾರೋ ಕಳ್ಳರು ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 12,000/- ರೂ ನಿಂದ 15,000/-ರೂ ಹಣವನ್ನು ಕಳವು ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ .ನಾರಾಯಣ ರಾವ್ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ.95/2025 ಕಲಂ. 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.ಅದರಂತೆ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


