Wednesday, June 24, 2026
Homeತಾಜಾ ಸುದ್ದಿಯಾರೇ ಆದರೂ ನ್ಯಾಯಾಲಯದ ತೀರ್ಪಿಗೆ ತಲೆ ಬಾಗಲೇಬೇಕು: ನಿಖಿಲ್‌ ಕುಮಾರಸ್ವಾಮಿ

ಯಾರೇ ಆದರೂ ನ್ಯಾಯಾಲಯದ ತೀರ್ಪಿಗೆ ತಲೆ ಬಾಗಲೇಬೇಕು: ನಿಖಿಲ್‌ ಕುಮಾರಸ್ವಾಮಿ

- Advertisement -
- Advertisement -

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಬಗ್ಗೆ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್‌ ತೀರ್ಪಿಗೆ ಯಾರೇ ಆದರೂ ತಲೆ ಬಾಗಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿರುದ್ಧ ಸೆಷನ್‌ ಕೋರ್ಟ್‌ನಲ್ಲಿ ಆದೇಶ ಪ್ರಕಟಗೊಂಡಿದೆ. ಕೋರ್ಟ್‌ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ. ಆವತ್ತೆ ಪ್ರಜ್ವಲ್‌ ಮೇಲೆ ಆರೋಪ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಮ್ಮ ಪಕ್ಷದ ವರಿಷ್ಠರು ಪಕ್ಷದಿಂದ ಅಮಾನತಿನಲ್ಲಿಟ್ಟಿದ್ದರು. ಆಗ ಅಪರಾಧಿ ಎಂಬ ತೀರ್ಪು ಬಂದಿರಲಿಲ್ಲ. ವರಿಷ್ಠರ ತೀರ್ಮಾನದ ಸ್ಪಷ್ಟತೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ವಿಷಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!