Monday, June 8, 2026
Homeಇತರಕೊರೊನಾದಿಂದ ಸಂಪೂರ್ಣ ಮುಕ್ತವಾದ ನ್ಯೂಜಿಲೆಂಡ್: ಕೊನೆಯ ರೋಗಿ​ ಕೂಡ ಗುಣಮುಖ.!

ಕೊರೊನಾದಿಂದ ಸಂಪೂರ್ಣ ಮುಕ್ತವಾದ ನ್ಯೂಜಿಲೆಂಡ್: ಕೊನೆಯ ರೋಗಿ​ ಕೂಡ ಗುಣಮುಖ.!

- Advertisement -
- Advertisement -

ವೆಲಿಂಗ್ಟನ್: ಕೊರೋನಾ ವೈರಸ್ ಪಿಡುಗನ್ನು ಹತೋಟಿಗೆ ತರುವಲ್ಲಿ ಉತ್ತಮ ಕ್ರಮಗಳನ್ನ ಕೈಗೊಂಡಿದ್ದಕ್ಕೆ ಮೆಚ್ಚುಗೆ ಗಳಿಸಿದ್ದ ನ್ಯೂಜಿಲೆಂಡ್ ದೇಶ ಈಗ ಇನ್ನೊಂದು ಮೈಲಿಗಲ್ಲು ಸಾಧಿಸಿದೆ. ಕಿವೀಡ್ ನಾಡಿನಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಬಂದಿದೆ.

ದೇಶದಲ್ಲಿ ಸೋಂಕಿಗೆ ಒಳಗಾಗಿದ್ದ ಕೊನೆಯ ವ್ಯಕ್ತಿ ರೋಗದಿಂದ ಚೇತರಿಸಿಕೊಂಡಿದ್ದು, ಯಾವುದೇ ಹೊಸ ಕೇಸ್‍ಗಳು ಪತ್ತೆಯಾಗಿಲ್ಲ ಎಂದು ಪ್ರಧಾನಮಂತ್ರಿ ಜಸಿಂಡಾ ಅರ್‍ಡ್ರೆನ್ ಹೇಳಿದ್ದಾರೆ.

ಕಳೆದ 17 ದಿನಗಳಿಂದ ನ್ಯೂಜಿಲೆಂಡ್‍ನ ಯಾವುದೇ ಭಾಗದಲ್ಲಿಯೂ ಹೊಸ ಕೋವಿಡ್ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. 17 ದಿನಗಳಿಂದ ದೇಶದಲ್ಲಿ 40,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 12 ದಿನಗಳಿಂದ ಯಾರೊಬ್ಬರು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಐವತ್ತು ಲಕ್ಷ ಜನಸಂಖ್ಯೆ ಇರುವ ನ್ಯೂಜಿಲೆಂಡ್‍ನಲ್ಲಿ ವೈರಸ್ ರೋಗಕ್ಕೆ ಕೇವಲ 22 ಮಂದಿ ಬಲಿಯಾಗಿದ್ದು, 1,500 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು.

- Advertisement -

Latest News

error: Content is protected !!