Tuesday, April 30, 2024
Homeಕರಾವಳಿಉಡುಪಿಕೊಡವೂರು: ಇಕೋ ಬ್ರಿಕ್ಸ್ ಪರಿಸರಸ್ನೇಹಿ ಕಾರ್ಯಕ್ರಮ, 1 ಕೆಜಿ ಪ್ಲಾಸ್ಟಿಕ್ ಗೆ 1 ಕೆಜಿ ಅಕ್ಕಿ...

ಕೊಡವೂರು: ಇಕೋ ಬ್ರಿಕ್ಸ್ ಪರಿಸರಸ್ನೇಹಿ ಕಾರ್ಯಕ್ರಮ, 1 ಕೆಜಿ ಪ್ಲಾಸ್ಟಿಕ್ ಗೆ 1 ಕೆಜಿ ಅಕ್ಕಿ ಸಂಕಲ್ಪ

spot_img
- Advertisement -
- Advertisement -

ಉಡುಪಿ: ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಿಗೆ ಅಂಗಡಿಗೆ ಹೋಗಿ ದಿನಸಿ ಸಾಮಗ್ರಿಗಳನ್ನು ತರುತ್ತೇವೆ. ಈ ಸಮಯದಲ್ಲಿ ಸಾಮಗ್ರಿ ಮತ್ತು ತರಕಾರಿಗಳಲ್ಲಿ ಎಲ್ಲದರಲ್ಲೂ ಪ್ಲಾಸ್ಟಿಕ್ ನೀಡಲಾಗುತ್ತದೆ.

ನಮ್ಮ ಹಿರಿಯರು ಹೇಳಿಕೊಟ್ಟ ದಾರಿಯನ್ನು ನಾವೀಗ ಬಿಟ್ಟಿದ್ದೇವೆ. ನಾವೇ ಅದೆಷ್ಟೋ ತಪ್ಪುಗಳನ್ನು ಮಾಡುತ್ತಿದ್ದೇವೆ. ಕೊಡವೂರು ಹಿರಿಯ ಪ್ರಾಥಮಿಕ ಶಾಲೆಯಯಲ್ಲಿ ಮಕ್ಕಳಿಗಾಗಿ ಇಕೋ ಬ್ರಿಕ್ಸ್ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು.

ಈ ಕಾರ್ಯಕ್ರಮವನ್ನು ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ನಡೆಸಿಕೊಟ್ಟರು. ಈ ಭೂಮಿಗೆ ಜೀವವಿದೆ ಇದನ್ನು ಪ್ಲಾಸ್ಟಿಕ್ನಿಂದ ಹಾಳು ಮಾಡುವ ಅಧಿಕಾರ ನಮಗಿಲ್ಲ ಎಂದರು.

ಚಾಕ್ಲೇಟ್ ಲೇಸ್ ನಂತಹ ತಿಂಡಿ ಪಾನಿಯಗಳು ಆರೋಗ್ಯಕ್ಕೆ ಒಳಿತಲ್ಲ. ಇದರಿಂದ ಭೀಕರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಸಿಗುವಂತಹ ಎಣ್ಣೆ ತಿಂಡಿಗಳು ನಮಗೆ ಅವಶ್ಯಕತೆ ಇಲ್ಲ ಇದರಿಂದ ಮರು ಮರುಬಳಕೆಯು ಸಾಧ್ಯವಿಲ್ಲ. ಹಾಗಾಗಿ ಪ್ಲಾಸ್ಟಿಕ್ಕನ್ನು ಇಕೋ ಬ್ರಿಕ್ಸ್ ಮಾಡಿ ಅಲಂಕಾರಿಕ ವಸ್ತುಗಳನ್ನಾಗಿ ಮಾರ್ಪಾಡು ಮಾಡಬಹುದು ಎಂದರು. ಹಾಗೇ ಮರುಬಳಕೆ ಆಗದಿರುವ ಪ್ಲಾಸ್ಟಿಕ್ ಗಳನ್ನು ತಂದುಕೊಟ್ಟರೆ 1 ಕೆಜಿ ಪ್ಲಾಸ್ಟಿಕ್ ಗೆ 1 ಕೆಜಿ ಅಕ್ಕಿ ನೀಡಲಾಗುವುದು ಎಂದು ನಗರಸಭಾ ಸದಸ್ಯರು ತಮ್ಮ ಸಂಕಲ್ಪವನ್ನು ಹೇಳಿಕೊಂಡರು.

ಶಾಲೆಯ ಸುತ್ತ-ಮುತ್ತ ಪ್ಲಾಸ್ಟಿಕ್ ಬಾಟಲಿಯಲ್ಲಿ ಗಿಡನೆಟ್ಟು ಶಾಲೆ ಮನೆಗಳನ್ನು ಅಲಂಕರಿಸಬಹುದು. ಈ ಪ್ಲಾಸ್ಟಿಕ್ ನಿಂದಾಗಿ ನದಿಗಳು ಹಾಳಾಗುತ್ತಿವೆ. ಪರಿಸರ ಹಾಳಾಗುತ್ತಿದೆ ನಾವು ಕುಡಿಯುವ ನೀರು ಕೂಡ ಕಲುಷಿತಗೊಂಡಿದೆ ಇದಕ್ಕೆಲ್ಲ ಕಾರಣ ನಾವೇ ಎಂದರು.

- Advertisement -
spot_img

Latest News

error: Content is protected !!