Thursday, June 25, 2026
Homeಉತ್ತರ ಕನ್ನಡಕಾರವಾರ : ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯ ಹತ್ಯೆ

ಕಾರವಾರ : ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯ ಹತ್ಯೆ

- Advertisement -
- Advertisement -

ಕಾರವಾರ : ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ಪಟ್ಟಣದ ಬಸವನಗಲ್ಲಿಯಲ್ಲಿ ನಡೆದಿದೆ. ಗೀತಾ ಪ್ರಭಾಕರ ಹುಂಡೇಕರ್ (72) ಕೊಲೆಯಾದ ಮಹಿಳೆ.

ಒಬ್ಬಂಟಿಯಾಗಿ ವಾಸಿಸುತ್ತಿದ್ದ ಗೀತಾ ಅವರು ವಿನಾಯಕ ಸೌಹಾರ್ದ ಕೋಅಪರೇಟಿವ್ ಸೊಸೈಟಿಗೆ ದಿನವೂ ಐದರಿಂದ ಹತ್ತು ಸಾವಿರ ಪಿಗ್ಮಿ ಸಂಗ್ರಹಿಸುತ್ತಿದ್ದರು. ‌ಇದನ್ನರಿತ ದುಷ್ಕರ್ಮಿಗಳು ಹಣಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ.

ಈ ಕುರಿತು ಗೀತಾ ಅವರ ಅಳಿಯ ರಾಘವೇಂದ್ರ ನಾಯ್ಕ ಪೊಲೀಸರಿಗೆ ದೂರು ನೀಡಿದ್ದು ಸಿದ್ದಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!