Tuesday, June 9, 2026
Homeಕರಾವಳಿವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕೋಳಿ ಸಾಗಾಟದ ಪಿಕಪ್ ವಾಹನ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕೋಳಿ ಸಾಗಾಟದ ಪಿಕಪ್ ವಾಹನ

- Advertisement -
- Advertisement -

ವಿಟ್ಲ: ಪೆರುವಾಯಿಯಿಂದ ಬೆರಿಪದವು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪೆರುವಾಯಿ ಸಂಕದ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ.

ಪೆರುವಾಯಿ ಸೇತುವೆ ಕಿರಿದಾಗಿದ್ದು, ಇದಕ್ಕೂ ಮೊದಲು ಇಳಿಜಾರು ಪ್ರದೇಶವಾದ್ದರಿಂದ ಪಿಕಪ್ ಬ್ರೇಕ್ ಸಮಸ್ಯೆಯಿಂದ ಸೇತುವೆಯ ಎದುರು ಭಾಗದಲ್ಲಿ ಅಡ್ಡಲಾಗಿ ಉರುಳಿ ಬಿದ್ದಿದೆ. ಚಾಲಕನ ಕೈಗೆ ತೀವ್ರವಾಗಿ ಗಾಯವಾಗಿದ್ದು, ಸ್ಥಳೀಯರು ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಿಕಪ್ ನಲ್ಲಿದ್ದ ಹೆಚ್ಚಿನ ಕೋಳಿಗಳು ಸತ್ತಿದ್ದು, ಸ್ಥಳೀಯರ ಪಾಲಾಗಿದೆ. ಸ್ಥಳೀಯರ ನೆರವಿನಿಂದಿಗೆ ಪಿಕಪ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

- Advertisement -

Latest News

error: Content is protected !!