Wednesday, June 24, 2026
Homeಕರಾವಳಿಬಂಟ್ವಾಳ; ಬಸ್ ನಲ್ಲಿ ಪಿಕ್ ಪಾಕೆಟ್ ಮಾಡಿ ಓಡುತ್ತಿದ್ದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ...

ಬಂಟ್ವಾಳ; ಬಸ್ ನಲ್ಲಿ ಪಿಕ್ ಪಾಕೆಟ್ ಮಾಡಿ ಓಡುತ್ತಿದ್ದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಟ್ರಾಫಿಕ್ ಪೊಲೀಸ್

- Advertisement -
- Advertisement -

ಬಂಟ್ವಾಳ: ಬಸ್ ನಲ್ಲಿ ಪ್ರಯಾಣಿಕರೊಬ್ಬರ  ಪಿಕ್ ಪಾಕೆಟ್ ಮಾಡಿ ಓಡಿ ಹೋಗುತ್ತಿದ್ದ ಕಳ್ಳನನ್ನು ಟ್ರಾಫಿಕ್ ಪೊಲೀಸ್ ರೆಡ್ ಹ್ಯಾಂಡಾಗಿ ಹಿಡಿದ ಘಟನೆ ಇಂದು ಬಿಸಿರೋಡಿನಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಉದುಮಾ ನಿವಾಸಿ ನಜೀರ್ ಬಂಧಿತ ಕಳ್ಳ. ಪುತ್ತೂರು ನಿವಾಸಿ ಕರುಣಾಕರ್ ಎಂಬವರು ಬಿಸಿರೋಡಿನಿಂದ ಪುತ್ತೂರಿಗೆ ತೆರಳುವುದಕ್ಕೆ ಬಿಸಿರೋಡಿನಲ್ಲಿ ಖಾಸಗಿ ಬಸ್ ಹತ್ತಿದ್ದರು. ಬಸ್ ತುಂಬಾ ಪ್ರಯಾಣಿಕರು ಇದ್ದ ಕಾರಣ ಇವರು ನಿಂತುಕೊಂಡಿದ್ದರು.ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ಕಳ್ಳ ನಜೀರ್  ಬಿಸಿರೋಡಿನಿಂದ ಪಾಣೆಮಂಗಳೂರು ತಲುಪುತ್ತಿದ್ದಂತೆ ಕರುಣಾಕರ ಅವರ ಪ್ಯಾಂಟ್ ನ ಹಿಂಬದಿಯಲ್ಲಿ ಇರಿಸಿದ್ದ ಹಣದ ಪರ್ಸ್ ನ್ನು ಕಿತ್ತುಕೊಂಡು ಬಸ್ ನಿಂದ ಇಳಿದಿದ್ದಾನೆ.ಈ ವೇಳೆ ಅವರ ಪ್ಯಾಂಟ್ ನ ಕಿಸೆಯಿಂದ ನಜೀರ್ ಪರ್ಸ್ ಕರುಣಾಕರ ಅವರು ಈತ ಪರ್ಸ್ ಎಗರಿಸುವುದನ್ನು ಬಸ್ ನೊಳಗಿದ್ದ ಪ್ರಯಾಣಿಕನೋರ್ವ ನೋಡಿದ್ದು,ಕೂಡಲೇ ಕರುಣಾಕರ ಅವರಿಗೆ ತಿಳಿಸಿದ್ದಾನೆ‌‌.


ಕಳ್ಳ ಬಸ್ ನಿಂದ ಇಳಿದು ಹೋಗುವುದನ್ನು ಗಮನಿಸಿ ಕರುಣಾಕರ ಕೂಡ ಇಳಿದಿದ್ದಾರೆ.ಅದಾಗಲೇ ನಜೀರ್ ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿ ಬಿಸಿರೋಡು ಕಡೆಗೆ ತೆರಳಿದ್ದಾನೆ.ಇವರು ಖಾಸಗಿ ಬಸ್ ನಲ್ಲಿ ಬಿಸಿರೋಡಿನ ಕಡೆ ತೆರಳಿದ್ದಾರೆ.


ಅದಾಗಲೇ ಇವರು ಸಂಬಂಧಿಕರೋರ್ವರ ಮೂಲಕ ಬಿಸಿರೋಡಿನ ಪಾಯಿಂಟ್ ನಲ್ಲಿದ್ದ ಪೋಲೀಸ್ ಸಿಬ್ಬಂದಿ ರಾಕೇಶ್ ಎಂಬವರಿಗೆ ನಡೆದ ವಿಚಾರ ತಿಳಿಸಿದ್ದ ಬಸ್ ನಲ್ಲಿ ಬಿಸಿರೋಡು ಕಡೆಗೆ ಬರುವುದನ್ನು ತಿಳಿಸಿದ್ದಾರೆ.ನಜೀರ್ ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಇಳಿದು ಕಾಸರಗೋಡು ಬಸ್ ಗಾಗಿ ತೆರಳುವ ವೇಳೆ ಟ್ರಾಫಿಕ್ ಪೋಲೀಸ್ ರಾಕೇಶ್ ಅವರ ಕೈ ಸಿಕ್ಕಿದ್ದಾನೆ.


ಈತನನ್ನು ನಗರ ಪೋಲೀಸ್ ಠಾಣೆಗೆ ಒಪ್ಪಿಸಿದ್ದು,ವಿಚಾರಣೆ ನಡೆಸುತ್ತಿದ್ದಾರೆ.ಕರುಣಾಕರ ಅವರ ಪರ್ಸ್ ನಲ್ಲಿ ಸುಮಾರು 6 ಸಾವಿರ ಜೊತೆ ಅನೇಕ ಅಗತ್ಯ ದಾಖಲೆಗಳಿದ್ದು,ಎಲ್ಲವೂ ಇವರಿಗೆ ವಾಪಾಸು ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!