Wednesday, July 15, 2026
Homeಕರಾವಳಿಬಂಟ್ವಾಳ; ವೃದ್ಧೆಯ ಚಿನ್ನದ ಸರ ಕದ್ದಿದ್ದ ಆರೋಪಿಗಳ ಬಂಧನ

ಬಂಟ್ವಾಳ; ವೃದ್ಧೆಯ ಚಿನ್ನದ ಸರ ಕದ್ದಿದ್ದ ಆರೋಪಿಗಳ ಬಂಧನ

- Advertisement -
- Advertisement -

ಬಂಟ್ವಾಳ; ದಿನಾಂಕ  14.12.2023 ರಂದು ಬಂಟ್ವಾಳದ  ಅಜ್ಜಿಬೆಟ್ಟು ಮೈದಾನ ಬಳಿ ಸರೋಜಿನಿ (72) ಎಂಬವರ ಕುತ್ತಿಗೆಯಲ್ಲಿದ್ದ 1.1/2 ಪವನ ತೂಕದ ಅಂದಾಜು ಬೆಲೆ 50,000/- ರೂ ಮೌಲ್ಯದ ಚಿನ್ನದ ಸರ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳಾದ  ಪ್ರಿಯದರ್ಶಿನಿ ಸರ್ಕಲ್ ಅಂಗರೆಗುಂಡಿ ಬೈಕಂಪಾಡಿ ಮಂಗಳೂರು ಇಲ್ಲಿನ ನಿವಾಸಿ ಅಶೋಕ (34), ಹಾಗೂ ಲೀಲಾ ಕಂಪೌಂಡ್ ಎಸ್.ಡಿ.ಎಮ್ ಶಾಲೆ ಹತ್ತಿರ ಶೇಡಿಗುರಿ ದಂಬೇಲ್ ಬೋಳಾರು ಗ್ರಾಮ ಮಂಗಳೂರು ಇಲ್ಲಿನ  ಸಚಿನ್ (34) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಳ್ಳತನ ಮಾಡಿದ ರೂ 50,000/- ಮೌಲ್ಯದ 1 ½ ಪವನ ತೂಕದ  ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ರೂ 25,000/- ಮೌಲ್ಯದ  ಕೆ. ಎ.19.ಕ್ಯು.2773  ನಂಬರಿನ  ಬೈಕ್ ಸೇರಿ, ಒಟ್ಟು 75000/ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.

- Advertisement -

Latest News

error: Content is protected !!