- Advertisement -
![]()
- Advertisement -
ಮಂಗಳೂರು ; ಪಿಜಿಗೆ ಕಡಿಮೆ ರೇಟಿಂಗ್ ನೀಡಿದ್ದಕ್ಕೆ ವಿದ್ಯಾರ್ಥಿಗೆ ಪಿಜಿ ಮಾಲೀಕ ಹಾಗೂ ಇತರರು ಸೇರಿ ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಕದ್ರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರಗಿ ಮೂಲದ ವಿಕಾಸ್ (18) ಹಲ್ಲೆಗೊಳಗಾದ ವಿದ್ಯಾರ್ಥಿ.
ಕಳೆದ ಆರು ತಿಂಗಳಿಂದ ಪಿ.ಜಿ ಯಲ್ಲಿದ್ದ ವಿಕಾಸ್ ಈಗ ಬೇರೆ ರೂಂ ಮಾಡಿಕೊಂಡಿದ್ದಾನೆ. ಪಿ.ಜಿ ಯಲ್ಲಿ ಊಟದಲ್ಲಿ ಹುಳ, ಭಾರೀ ಗಲೀಜು, ಅತೀ ಕೆಟ್ಟ ಶೌಚಾಲಯ ಅಂತಾ ವಿದ್ಯಾರ್ಥಿ ಆರೋಪಿಸಿದ್ದನು. ಈ ಬಗ್ಗೆ ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಕಾಮೆಂಟ್ ಮಾಡಿದ್ದನು. ಕಾಮೆಂಟ್ ಮಾಡಿದ್ದ ವಿಕಾಸ್ ಗೆ ಪಿ.ಜಿ ಮಾಲೀಕ ಸಂತೋಷ್ ಧಮಕಿ ಹಾಕಿದ್ದು ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ . ಡಿಲೀಟ್ ಮಾಡದೇ ಇದ್ದಾಗ ಐದು ಜನರ ತಂಡ ಜೊತೆ ಬಂದು ಮಾರ್ಚ್ 17 ರ ರಾತ್ರಿ 10.30 ರ ವೇಳೆಗೆ ಹಲ್ಲೆ ಮಾಡಿದೆ. ಈ ಬಗ್ಗೆ ಹಲ್ಲೆಗೊಳಗಾದ ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ವಿಕಾಸ್ ದೂರು ನೀಡಿದ್ದಾನೆ.
- Advertisement -


