Saturday, June 13, 2026
Homeಕರಾವಳಿದ‌.ಕ. ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾದ ಪಿಎಫ್ ಐ ಮುಖಂಡರಿಗೆ 7 ದಿನಗಳ ನ್ಯಾಯಾಂಗ ಬಂಧನ

ದ‌.ಕ. ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾದ ಪಿಎಫ್ ಐ ಮುಖಂಡರಿಗೆ 7 ದಿನಗಳ ನ್ಯಾಯಾಂಗ ಬಂಧನ

- Advertisement -
- Advertisement -

ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವಶಕ್ಕೆ ಪಡೆಯಲಾದ 14 ಪಿಎಫ್ ಐ ಕಾರ್ಯಕರ್ತರು ಮತ್ತು ಮುಖಂಡರನ್ನು 7 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಟ್ಟು 14 ಆರೋಪಿಗಳನ್ನು ಮಂಗಳೂರು ಮತ್ತು ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿ 14 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮಂಗಳೂರು ನಗರ ಪೊಲೀಸರು 10 ಜನರನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು 4 ಜನರನ್ನು ವಶಕ್ಕೆ ಪಡೆದಿದ್ದರು.

ಮೊಹಮ್ಮದ್ ಶರೀಫ್, ಮುನೀರ್ ಕುದ್ರೋಳಿ, ಮೊಹಮ್ಮದ್ ನೌಫಾಲ್, ಶಬೀರ್ ಅಹ್ಮದ್, ನವಾಜ್ ಉಳ್ಳಾಲ, ಮೊಹಮ್ಮದ್ ಇಕ್ಬಾಲ್, ದಾವುದ್ ನೌ಼ಷಾದ್, ನಝೀರ್, ಇಸ್ಮಾಯಿಲ್ ಇಂಜಿನಿಯರ್, ಇಬ್ರಾಹಿಂ ಮತ್ತು ಜಾಬೀರ್ ಬಂಧಿಸಲ್ಪಟ್ಟವರಾಗಿದ್ದಾರೆ.

- Advertisement -

Latest News

error: Content is protected !!