Tuesday, May 7, 2024
Homeಕರಾವಳಿಅಕ್ಕ-ತಂಗಿಯರ ಬಾಳಿಗೆ ಬೆಳಕಾದ ಬದುಕು ಕಟ್ಟೋಣ ಬನ್ನಿ ತಂಡ

ಅಕ್ಕ-ತಂಗಿಯರ ಬಾಳಿಗೆ ಬೆಳಕಾದ ಬದುಕು ಕಟ್ಟೋಣ ಬನ್ನಿ ತಂಡ

spot_img
- Advertisement -
- Advertisement -

ಬೆಳ್ತಂಗಡಿ : ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಸದಾ ಕೈಜೋಡಿಸಿ ನೊಂದವರ ಬಾಳಿಗೆ ಬೆಳಕು ನೀಡುತ್ತಿರುವ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ, ಹೆತ್ತವರನ್ನು ಕಳೆದುಕೊಂಡಿರುವ ಇಬ್ಬರು ಶಾಲಾ ವಿದ್ಯಾರ್ಥಿನಿಯರ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚ ಭರಿಸಲು ಮತ್ತು ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಲು ಮುಂದಾಗಿದೆ.

ವೋ

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಕ್ಷಯ ನಗರ ನಿವಾಸಿಗಳಾದ ಸ್ನೇಹಾ ಕಲ್ಮಂಜದ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಹಾಗೂ ತಂಗಿ ದೀಪಶ್ರೀ ಕಲ್ಮಂಜದ ಸರಕಾರಿ ಹಿಪ್ರಾ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದು ವಿದ್ಯಾಭ್ಯಾಸ,ಕ್ರೀಡೆ ಹಾಗೂ ಇತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ.

ಈ ಇಬ್ಬರು ಮಕ್ಕಳಿಗೆ ಹೆತ್ತವರು ಇಲ್ಲದ ಕಾರಣದಿಂದ ಮಾವನ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುವ ಮಾವ ಕೂಡ ಸಣ್ಣ ವಯಸ್ಸಿನವರಾಗಿದ್ದು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ.ಮನೆಯ ಅಡುಗೆ ಹಾಗೂ ಇನ್ನಿತರ ಕೆಲಸಗಳನ್ನು ಈ ಮಕ್ಕಳೇ ಮಾಡುವ ಅನಿವಾರ್ಯತೆ ಉಂಟಾಗಿದೆ. ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಶಾಲೆಗೆ ತೆರಳುವ ಈ ವಿದ್ಯಾರ್ಥಿನಿಯರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಯೋಗದಲ್ಲಿ ದೀಪಶ್ರೀ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಮತ್ತು ಸ್ನೇಹ ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿದ್ದು ಅದಲ್ಲದೆ ವಿದ್ಯಾಭ್ಯಾಸದಲ್ಲಿ ಅಕ್ಕ-ತಂಗಿ ಮುಂಚೂನಿಯಲ್ಲಿದ್ದಾರೆ.

ಅಕ್ಕ- ತಂಗಿಯರ ಬಾಳಿಗೆ ಬೆಳಕಾದ ಬದುಕು ಕಟ್ಟೋಣ ಬನ್ನಿ ತಂಡ : ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ಹಾಗೂ ಸದಸ್ಯರಿಗೆ ಈ ಮಕ್ಕಳ ಪರಿಸ್ಥಿತಿಯ ಬಗ್ಗೆ ತಿಳಿದು ಬಂತು. ಕೂಡಲೇ ಕಾರ್ಯ ಪ್ರವೃತ್ತವಾದ ತಂಡವು ಈ ಮಕ್ಕಳ ವಿದ್ಯಾಭ್ಯಾಸದ “ಶಿಕ್ಷಣ ದೀವಿಗೆ” ಹಾಗೂ ಸುಸಜ್ಜಿತ ಮನೆಯೊಂದನ್ನು ನಿರ್ಮಿಸುವ “ಸೇವೆ ನಮ್ಮದು ಬದುಕು ನಿಮ್ಮದು”  ಸಂಕಲ್ಪವನ್ನು ಮಾಡಿತು.

ಸೆ.27ರಂದು ತಂಡದ ಸಂಚಾಲಕರಾದ ಸಂಧ್ಯಾ ಟ್ರೇಡರ್ಸ್ ನ ಮಾಲೀಕ ರಾಜೇಶ್ ಪೈ  ಅವರ ಜನ್ಮದಿನದಂದು ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಕಾರ್ಯಕ್ಕೆ ಗೆಳೆಯರ ಬಳಗ ಅಕ್ಷಯನಗರ,ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಬದುಕು ಕಟ್ಟೋಣ ಬನ್ನಿ ತಂಡದ ಕಲ್ಮಂಜದ ಸದಸ್ಯರು, ಕಲ್ಮಂಜ ಗ್ರಾಮ ಪಂಚಾಯಿತಿ, ಸ್ಥಳೀಯರು ಸಹಕರಿಸಲಿದ್ದಾರೆ.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಹಾಗೂ ಸದಸ್ಯರು, ಕಲ್ಮಂಜ ಗ್ರಾಪಂ ಅಧ್ಯಕ್ಷ ಶ್ರೀಧರ್ ಎಮ್, ಶಶಿಧರ ಎಮ್, ಗೆಳೆಯರ ಬಳಗದ ವಿಲ್ಸನ್ ಮೋನಿಸ್, ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ ಟಿ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯ ಉಪಾಧ್ಯಕ್ಷ ಹರೀಶ್ ದೇವಾಡಿಗ ಮತ್ತು ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು

ಚಾರ್ಮಾಡಿಯಲ್ಲಿ 2019ರಲ್ಲಿ ಉಂಟಾದ ಮೃತ್ಯುಂಜಯ ನದಿಯ ಭೀಕರ ನೆರೆ ಸಂದರ್ಭದಲ್ಲಿ ರೂಪುಗೊಂಡ ಬದುಕು ಕಟ್ಟೋಣ ಬನ್ನಿ ತಂಡ ಇಲ್ಲಿಯ ಕೊಳಂಬೆ ಪ್ರದೇಶವನ್ನು ಸಂಪೂರ್ಣ ಪುನರ್ ನಿರ್ಮಾಣಗೊಳಿಸಿ ಪರಿಸರದ ನಾಗರಿಕರ ಕೃಷಿ ಭೂಮಿಯನ್ನು ಕೃಷಿ ಸಹಿತ ಮರು ನಿರ್ಮಿಸಿ ಕೊಟ್ಟು ಪ್ರದೇಶದಲ್ಲಿ ನೆರೆಯ ಪರಿಣಾಮ ಮನೆ ಕಳೆದುಕೊಂಡ 12 ಜನರಿಗೆ ಮನೆಗಳನ್ನು ರಚಿಸಿಕೊಡಲು ಪೂರ್ಣ ಸಹಕಾರ ನೀಡಿತ್ತು.

 ಇತ್ತೀಚೆಗೆ ಉಜಿರೆಯ ಮುಂಡತ್ತೋಡಿ ಸರಕಾರಿ ಶಾಲೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿ ಕೊಟ್ಟು ಶಾಲೆಯ ಪೂರ್ಣ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದೆ. ಇದರ ಜತೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಸಾರ್ವಜನಿಕ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡುತ್ತಿರುವ ತಂಡವು ಈಗ ಪೋಷಕರಿಲ್ಲದ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಮನೆ ನಿರ್ಮಿಸಲು ಮುಂದಾಗಿದೆ.

- Advertisement -
spot_img

Latest News

error: Content is protected !!