Friday, April 26, 2024
Homeಉದ್ಯಮವಾಹನ ಸವಾರರಿಗೆ ಗುಡ್ ನ್ಯೂಸ್...! ಪೆಟ್ರೋಲ್ ಡೀಸೆಲ್ ಬೆಲೆ ಶೀಘ್ರದಲ್ಲೇ ಮತ್ತಷ್ಟು ಇಳಿಕೆ...??

ವಾಹನ ಸವಾರರಿಗೆ ಗುಡ್ ನ್ಯೂಸ್…! ಪೆಟ್ರೋಲ್ ಡೀಸೆಲ್ ಬೆಲೆ ಶೀಘ್ರದಲ್ಲೇ ಮತ್ತಷ್ಟು ಇಳಿಕೆ…??

spot_img
- Advertisement -
- Advertisement -

ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್​​ ಬೆಲೆ ಇಳಿಕೆ ಕಂಡಿರೋದ್ರಿಂದ ಖುಷಿಯಲ್ಲಿರುವ ಜನಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಕೇಳುವ ಅವಕಾಶವಿದೆ. ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ ಕಚ್ಚಾ ತೈಲ ಬಿಡುಗಡೆ ಮಾಡಲು ನಿರ್ಧರಿಸಿದ್ದು ಇದರಿಂದಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ.

ದೆಹಲಿಯಲ್ಲಿ ನಡೆದ ಉನ್ನತ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್​ ಸಿಂಗ್​ ಪುರಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಅಮೆರಿಕ, ಚೀನಾ, ಜಪಾನ್​ ಹಾಗೂ ದಕ್ಷಿಣ ಕೋರಿಯಾ ಸೇರಿದಂತೆ ಇತರೆ ಪ್ರಮುಖ ಜಾಗತಿಕ ಇಂಧನ ಗ್ರಾಹಕರ ಜೊತೆಯಲ್ಲಿ ಸಮಾಲೋಚನೆಯಲ್ಲಿ ಐದು ಮಿಲಿಯನ್​ ಬ್ಯಾರೆಲ್​ ಕಚ್ಚಾ ತೈಲವನ್ನು ಬಿಡುಗಡೆ ಮಾಡಲಾಗುತ್ತದೆ. ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಸಲುವಾಗಿ ಅಮೆರಿಕವು ಪೆಟ್ರೋಲಿಯಂ ನಿಕ್ಷೇಪಗಳನ್ನು ಬಿಡುಗಡೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾರ್ಯತಂತ್ರವು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬಂದಲ್ಲಿ ಇಂಧನಗಳ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಕಂಡು ಬರಲಿದೆ. ಕೇಂದ್ರ ಸರ್ಕಾರವು ನವೆಂಬರ್​ ಮೂರರಂದು ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಕ್ರಮವಾಗಿ ಐದು ಹಾಗೂ ಹತ್ತು ರೂಪಾಯಿ ಇಳಿಕೆ ಮಾಡಿತ್ತು.

- Advertisement -
spot_img

Latest News

error: Content is protected !!