Sunday, June 7, 2026
Homeಕರಾವಳಿಉಡುಪಿಉಡುಪಿ: ಸ್ಕೂಟರ್ ಗೆ ನಾಯಿಯ ಮೃತದೇಹ ಕಟ್ಟಿ ಪೇಟೆಯಲ್ಲಿ ಎಳೆದೊಯ್ದು ವಿಕೃತಿ

ಉಡುಪಿ: ಸ್ಕೂಟರ್ ಗೆ ನಾಯಿಯ ಮೃತದೇಹ ಕಟ್ಟಿ ಪೇಟೆಯಲ್ಲಿ ಎಳೆದೊಯ್ದು ವಿಕೃತಿ

- Advertisement -
- Advertisement -

ಉಡುಪಿ: ಮೃತಪಟ್ಟಿದ್ದ ನಾಯಿಗೆ ಸರಪಳಿ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದಿರುವ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಕಾಪು ತಾಲೂಕಿನ ಶಿರ್ವದಲ್ಲಿ ಈ ಕೃತ್ಯ ಜರುಗಿದ್ದು, ವ್ಯಕ್ತಿಯೋರ್ವ ಸ್ಕೂಟರ್ ಗೆ ಕಟ್ಟಿ ಮೃತಪಟ್ಟಿದ್ದ ನಾಯಿಯನ್ನು ಎಳೆದೊಯ್ದಿದ್ದಾನೆ.

ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬಾತ ಈ ಕೃತ್ಯ ಎಸಗಿದ್ದು, ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ನಾಯಿಯನ್ನು ಸುಮಾರು ಐದು ಕಿಲೋ ಮೀಟರ್ ದೂರ ಎಳೆದೊಯ್ಯಲಾಗಿದೆ.ನಾಯಿಯ ದೇಹಕ್ಕೆ ಸರಪಳಿ ಹಾಕಿ ಸ್ಕೂಟರ್‌ನ ಸೀಟಿಗೆ ಕಟ್ಟಲಾಗಿತ್ತು.ಶಿರ್ವ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

- Advertisement -

Latest News

error: Content is protected !!