Saturday, June 27, 2026
Homeಕರಾವಳಿಕರಾವಳಿ ಬೆಡಗಿ ಸೋನಾಲ್ ಮೊಂತೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಮದುವೆ ಡೇಟ್ ಫಿಕ್ಸ್

ಕರಾವಳಿ ಬೆಡಗಿ ಸೋನಾಲ್ ಮೊಂತೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಮದುವೆ ಡೇಟ್ ಫಿಕ್ಸ್

- Advertisement -
- Advertisement -

ಬೆಂಗಳೂರು: ಕರಾವಳಿ ಬೆಡಗಿ ಸೋನಾಲ್ ಮೊಂತೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಮದುವೆ ಆಗ್ತಾರೆ ಅನ್ನೋ ಸುದ್ದಿ ಬಹು ದಿನಗಳಿಂಗ ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ತರುಣ್ ಸುಧೀರ್ ಸಣ್ಣದೊಂದು ಸುಳಿವು ಕೊಟ್ಟಿದ್ರೂ ಸೋನಾಲ್ ಮಾತ್ರ ತುಟಿ ಪಿಟಿಕ್ ಅಂದಿರಲಿಲ್ಲ. ಇದೀಗ ಇಬ್ಬರ ಮದುವೆದ ದಿನಾಂಕ ಬಹಿರಂಗವಾಗಿದೆ.

ಯೆಸ್,, ಆಗಸ್ಟ್ 10, 11ರಂದು ತರುಣ್ ಮತ್ತು ಸೋನಾಲ್ ಮದುವೆ ನಡೆಯಲಿದೆ.

ರಾಬರ್ಟ್ ಚಿತ್ರದ ಸೆಟ್ ಗಳಲ್ಲಿ ಪ್ರಾರಂಭವಾದ ಇವರಿಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಅರಳಿದೆ. ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ ಅಂತ ಜೈಲಿನಲ್ಲಿರುವ ನಟ ದರ್ಶನ್‌ ಭೇಟಿಯಾದ ಬಳಿಕ ತರುಣ್‌ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ ಅವರು ಮಾತನಾಡಿ ನಾನು ಬಂದೇ ಬರ್ತೀನಿ’ ಎನ್ನುವ ನಂಬಿಕೆ ಅವರಲ್ಲಿ ಇದೆ. ದರ್ಶನ್​ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲೇ ನಾವು ಕೂಡ ಇದ್ದೇವೆ. ಹಾಗೆಯೇ ಆಗಲಿ ಅಂತ ಪ್ರಾರ್ಥಿಸುತ್ತೇವೆ ಎಂದಿದ್ದರು.

- Advertisement -

Latest News

error: Content is protected !!