Saturday, May 18, 2024
Homeಕರಾವಳಿಉಡುಪಿಕೋಟ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ !

ಕೋಟ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ !

spot_img
- Advertisement -
- Advertisement -

ಕೋಟ: ಬ್ರಹ್ಮಾವರದಿಂದ ಗುಲ್ಬರ್ಗಕ್ಕೆ ಹೋಟೇಲ್ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಭಾಸ್ಕರ ಶೆಟ್ಟಿಗಾರ ( 38 ) ನಾಪತ್ತೆಯಾದ ವ್ಯಕ್ತಿ. ಇವರು ಕಳೆದೊಂದು ವರ್ಷದಿಂದ ಗುಲ್ಬರ್ಗದ ಹೋಟೆಲ್ ವೊಂದರಲ್ಲಿ ದುಡಿಯುತ್ತಿದ್ದರು. ಗುಲ್ಬರ್ಗ ದಿಂದ ಊರಿಗೆ ಬಂದಿದ್ದ ಇವರು ಮತ್ತೆ ವಾಪಾಸ್ಸು ಕೆಲಸಕ್ಕೆ ತೆರಳಿದ್ದರು. ಆದರೆ ಭಾಸ್ಕರ ಅವರು ಹೋಟೆಲ್ ಗೆ ತಲುಪಿಲ್ಲ ಎಂದು ತಿಳಿದು ಬಂದಿದೆ.

ಈ ವೇಳೆ ಭಾಸ್ಕರ ಶೆಟ್ಟಿಗಾರರವರನ್ನು ಸಂಬಂಧಿಕರ ಮನೆಯಲ್ಲಿ ಹಾಗೂ ಕುಂದಾಪುರ ಸುತ್ತಮುತ್ತ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ . ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!