Saturday, May 4, 2024
Homeಜ್ಯೋತಿಷ್ಯಇಂದು ಯಾವ ರಾಶಿಯವರಿಗೆ ಶುಭ ಶುಕ್ರವಾರ

ಇಂದು ಯಾವ ರಾಶಿಯವರಿಗೆ ಶುಭ ಶುಕ್ರವಾರ

spot_img
- Advertisement -
- Advertisement -

ಮೇಷ: ಮನೆಯಲ್ಲಿ ವಿವಾಹ ಪ್ರಸ್ತಾಪಗಳು ನಡೆಯಲಿವೆ. ಆರ್ಥಿಕ ಲಾಭ , ಕಾರ್ಯ ಸಾಧನೆ . ನೂತನ ದಂಪತಿಗಳ ಮಧ್ಯೆ ವಿರಸ ಮೂಡಲಿದೆ. ವಿದೇಶ ಯಾನದ ಭಾಗ್ಯ.


ವೃಷಭ :ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದಾಗಿ ಉದ್ಯೋಗ ಲಭ್ಯವಾಗುವುದು. ಉದ್ಯೋಗ ಅರ್ಜಿಯ ಅನುಮೋದನೆ ಒಂದು ಪತ್ರವು ಕೈ ಸೇರುವ ಸಾಧ್ಯತೆ. ಧಾನ್ಯ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಹಿನ್ನಡೆ.


ಮಿಥುನ: ವ್ಯಾಪಾರಿ ವರ್ಗದವರಿಗೆ ಕಾರ್ಯದೊತ್ತಡ . ಆದಾಯ ಉತ್ತಮ . ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ. ಹಿರಿಯರು ತೀರ್ಥ ಯಾತ್ರೆಗೆ ತೆರಳಲಿದ್ದಾರೆ.


ಕಟಕ: ವಿವಾಹ ಸಂಬಂಧಿ ಅಡೆತಡೆಗಳಿಗೆ ಪರಿಹಾರ ಕಾಣಲು ಕುಲದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಅಡೆತಡೆಗಳಿದ್ದರೂ ಅಂತಿಮವಾಗಿ ದೈವಾನುಕೂಲದಿಂದ ಕಾರ್ಯ ಸಾಧನೆಯಾಗಲಿದೆ.


ಸಿಂಹ : ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ. ಹೂಡಿಕೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ.


ಕನ್ಯಾ: ಯಾವುದೋ ಮಾನಸಿಕ ಚಿಂತೆ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯ ಅಸಮಾಧಾನಕ್ಕೆ ಕಾರಣರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.


ತುಲಾ : ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ.


ವೃಶ್ಚಿಕ: ಸಹಕಾರಿ ಕ್ಷೇತ್ರದಲ್ಲಿರುವವರಿಗೆ ಲಾಭ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಪ್ರೀತ ಪಾತ್ರರೊಂದಿಗೆ ಸುಂದರ ಸಮಯ ಕಳೆಯುವಿರಿ. ಆದರೆ ಇಲ್ಲದ ಅಪವಾದ ಕೇಳಿಬಂದೀತು.


ಧನಸ್ಸು : ನಿಮ್ಮ ಸಕರಾತ್ಮಕ ಗುಣಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಮನ್ನಣೆ ಗಳಿಸುವಿರಿ, ಇಂದು ಅಧಿಕ ಲಾಭವಾಗಲಿದೆ, ಕೆಲವರಿಗೆ ಹೊಸ ಉದ್ಯೋಗ ಸಿಗುವ ಭಾಗ್ಯ, ನಿಮ್ಮ ತಂದೆಯಿಂದ ನಿಮಗೆ ಮಾರ್ಗದರ್ಶನ, ಪತ್ನಿ ವರ್ಗದಿಂದ ವ್ಯವಹಾರ ಕಾರ್ಯದಲ್ಲಿ ಲಾಭ ಸಿಗಲಿದೆ, ಸಹಭಾಗಿತ್ವ ವ್ಯವಹಾರ ಹೊಸ ಹೂಡಿಕೆ ಪ್ರಯೋಜನ ಪಡೆಯುತ್ತದೆ.


ಮಕರ: ಅಂದುಕೊಂಡ ಕಾರ್ಯಗಳು ಅರ್ಧಕ್ಕೇ ನಿಂತು ಮನಸ್ಸಿಗೆ ಬೇಸರವೆನಿಸಲಿದೆ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರದಾಡಬೇಕಾದೀತು.


ಕುಂಭ: ಪ್ರವಾಸ, ಮೋಜು ಮಸ್ತಿಗಾಗಿ ವಿಪರೀತ ಖರ್ಚು ಮಾಡುವಿರಿ. ಆದರೆ ಧನಾಗಮನದ ಬಗ್ಗೆ ಚಿಂತೆಯಾಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರು ಭೇಟಿಯಾಗಲಿದ್ದಾರೆ. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾಗಬಹುದು.


ಮೀನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಮಾಡಿದ ತಪ್ಪಿಗೆ ನೀವು ಅವಮಾನ, ಬೈಗುಳ ಕೇಳಬೇಕಾಗಿ ಬರಬಹುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು.

- Advertisement -
spot_img

Latest News

error: Content is protected !!