Monday, June 8, 2026
Homeಕರಾವಳಿಕಡಬ: ಮದ್ಯ ಸೇವಿಸಿ ಕೆಎಸ್ ಆರ್ ಟಿಸಿ ಬಸ್ ನಲ್ಲೇ ತೂರಾಡಿ ಬಿದ್ದ ಗ್ರಾಮಕರಣಿಕ: ಪೊಲೀಸ್...

ಕಡಬ: ಮದ್ಯ ಸೇವಿಸಿ ಕೆಎಸ್ ಆರ್ ಟಿಸಿ ಬಸ್ ನಲ್ಲೇ ತೂರಾಡಿ ಬಿದ್ದ ಗ್ರಾಮಕರಣಿಕ: ಪೊಲೀಸ್ ಠಾಣೆಗೆ ಬಸ್ ಒಯ್ದ ಚಾಲಕ

- Advertisement -
- Advertisement -

ಕಡಬ: ಗ್ರಾಮಕರಣಿಕನೋರ್ವ ಮದ್ಯ ಸೇವಿಸಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೇ ತೂರಾಡಿ ಬಿದ್ದ ಘಟನೆ
ಸುಬ್ರಹ್ಮಣ್ಯ ಬಳಿ ನಡೆದಿದೆ.

ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮಕರಣಿಕ ನಾಗಸುಂದರ ಎಂಬಾತ ಮದ್ಯ ಸೇವಿಸಿ ಬಸ್ ನಲ್ಲೇ ಬಿದ್ದಿದ್ದಾನೆ.

ಗ್ರಾಮ ಕರಣಿಕ ಬಸ್ ನಲ್ಲೇ ಮದ್ಯದ ನಶೆಯಲ್ಲಿ ಬಿದ್ದ ಕಾರಣ ಬಸ್ ಚಾಲಕ ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ನಾಗಸುಂದರ ಈ ಹಿಂದೆಯೂ ಹಲವು ಬಾರಿ ಮದ್ಯಪಾನ ಮಾಡಿ ಬಿದ್ದಿದ್ದು, ಮದ್ಯ ಸೇವನೆಯ ಚಟದ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು.

ಇಂದು ಬಸ್ ನಲ್ಲಿ ಬಿದ್ದಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆಯಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನಾಗಸುಂದರ ಕರ್ತವ್ಯದ ವೇಳೆಯೇ ಮದ್ಯಪಾನದ ಚಟ ಹೊಂದಿರುವ ಕಾರಣ ಕಚೇರಿಯಲ್ಲಿ ಹಲವು ದಾಖಲೆಗಳೂ ಕಾಣೆಯಾಗಿರುವ ಬಗ್ಗೆಯೂ ಆರೋಪ ವ್ಯಕ್ತವಾಗಿದೆ.

- Advertisement -

Latest News

error: Content is protected !!