Monday, April 29, 2024
Homeಪ್ರಮುಖ-ಸುದ್ದಿಕೊಟ್ಟ ಮಾತಿನಂತೆ ನಡೆದುಕೊಂಡ ಡ್ರೋಣ್ ಪ್ರತಾಪ್; ಬಿಗ್ ಬಾಸ್ ಶೋನಲ್ಲಿ ತಮಗೆ ಸಿಕ್ಕ ಎಲೆಕ್ಟ್ರಿಕ್ ಸ್ಕೂಟರ್...

ಕೊಟ್ಟ ಮಾತಿನಂತೆ ನಡೆದುಕೊಂಡ ಡ್ರೋಣ್ ಪ್ರತಾಪ್; ಬಿಗ್ ಬಾಸ್ ಶೋನಲ್ಲಿ ತಮಗೆ ಸಿಕ್ಕ ಎಲೆಕ್ಟ್ರಿಕ್ ಸ್ಕೂಟರ್ ನ್ನು ಬಡ ಯುವಕನಿಗೆ ನೀಡಿದ ಪ್ರತಾಪ್

spot_img
- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಸೀಸನ್ 10 ರಲ್ಲಿ ರನ್ನರ್ ಅಪ್ ಆಗಿರುವ ಡ್ರೋಣ್ ಪ್ರತಾಪ್ ತಾವು ಕೊಟ್ಟ ಮಾತಿಗೆ ತಪ್ಪಲ್ಲ ಅನ್ನೋ ರೀತಿ ನಡೆದುಕೊಂಡಿದ್ದಾರೆ.

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಂದ ಹಣ ಹಾಗೂ ಬಹುಮಾನವನ್ನು ತಾನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅದನ್ನು ಅಗತ್ಯವಿರುವವರಿಗೆ ನೀಡುವುದಾಗಿ ಫಿನಾಲೆ ವೇದಿಕೆಯಲ್ಲಿ ಹೇಳಿದ್ದರು. ಅದರಂತೆ ಫಿನಾಲೆಯಲ್ಲಿ ರನ್ನರ್ ಅಪ್ ಆದ ಪ್ರತಾಪ್ ಅವರಿಗೆ ಹಣದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ನ್ನು ಸಹ ನೀಡಲಾಗಿತ್ತು.

ಸ್ಕೂಟರ್ ಸಿಕ್ಕ ಬಳಿಕ ಪ್ರತಾಪ್ ಸ್ಕೂಟರ್ ನ್ನು ಈ ಹಿಂದೆಯೇ ಹೇಳಿದಂತೆ ಬಡವರಾಗಿ ಫುಡ್ ಡೆಲಿವರಿ ಮಾಡುಗ ಯಾರಿಗಾದರೂ ಅದನ್ನು ನೀಡುತ್ತೇವೆ ಎಂದಿದ್ದರು. ಇದೀಗ ಮಾತಿಗೆ ತಕ್ಕಂತೆ ಅವರು ಸ್ಕೂಟರ್ ನ್ನು ಯುವಕನೊಬ್ಬನಿಗೆ ನೀಡಿದ್ದಾರೆ.ಬಿಗ್ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ..

ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ ಹಾಗೂ ಸಂಜೆಯ ಮೇಲೆ FOOD DELIVERY ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು.ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು sieze ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ELECTRIC ಗಾಡಿಯನ್ನು ಈ ಹುಡುಗನಿಗೆ ನೀಡಿದು ನನಗೆ ತುಂಬಾ ಖುಷಿ ತಂದಿದೆ ಎಂದು ಡ್ರೋನ್ ಪ್ರತಾಪ್​ ಬರೆದಿದ್ದಾರೆ.

ಸ್ಕೂಟರ್ ನೀಡಿದ ಫೋಟೋವನ್ನು ಪ್ರತಾಪ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!