Sunday, May 5, 2024
Homeಕರಾವಳಿಉಡುಪಿಉಡುಪಿ : ಬುರ್ಖಾ ಧರಿಸಿ ಚಿನ್ನದಂಗಡಿಗೆ ಬಂದ ಮಹಿಳೆಯರು ; ನಕಲಿ ಚಿನ್ನ ನೀಡಿ ಸುಮಾರು...

ಉಡುಪಿ : ಬುರ್ಖಾ ಧರಿಸಿ ಚಿನ್ನದಂಗಡಿಗೆ ಬಂದ ಮಹಿಳೆಯರು ; ನಕಲಿ ಚಿನ್ನ ನೀಡಿ ಸುಮಾರು 2 ಲಕ್ಷದ ಚಿನ್ನಾಭರಣದೊಂದಿಗೆ ಪರಾರಿ

spot_img
- Advertisement -
- Advertisement -

ಉಡುಪಿ : ಬುರ್ಖಾ ಧರಿಸಿ ಚಿನ್ನದಂಗಡಿಗೆ ಬಂದ ಮಹಿಳೆಯರು ನಕಲಿ ಚಿನ್ನ ನೀಡಿ ಸುಮಾರು 2 ಲಕ್ಷದ ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕನಕದಾಸ ರಸ್ತೆಯಲ್ಲಿರುವ ನಿತ್ಯಾನಂದ ಎಂಬವರ ಮಾರುತಿ ಜುವೆಲ್ಲರಿಗೆ ಮೂವರು ಬುರ್ಖಧಾರಿ ಮಹಿಳೆಯರು ಗ್ರಾಹಕರಂತೆ ಬಂದಿದ್ದಾರೆ. ಬಂದು 15.800 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಖರೀದಿಸಿದ್ದಾರೆ. ಇದಕ್ಕೆ ಬದಲಾಗಿ ಮಹಿಳೆಯರು ತಮ್ಮ ಬಳಿ ಇದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ. ಉಳಿದ ಹಣದ ಪೈಕಿ 19,000ರೂ. ಹಣವನ್ನು ನಗದಾಗಿ ಪಡೆದುಕೊಂಡು ಅಂಗಡಿಯಿಂದ ಕಾಲ್ಕಿತ್ತಿದ್ದಾರೆ.

ವ್ಯವಹಾರದ ಸಮಯ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದ ಅವರ ಗಮನವನ್ನು ಬೇರೆಡೆಗೆ ಸೆಳೆದು, ಪರೀಕ್ಷಿಸಲು ನೀಡಿದ್ದ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನದ ಆಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಮಾಲೀಕನಿಗೆ ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!