Monday, June 8, 2026
Homeಉತ್ತರ ಕನ್ನಡಜಾತ್ರೆ ಮುಗಿಸಿ ಈಜಲು ಹೋದ ಯುವಕ ನೀರು ಪಾಲು

ಜಾತ್ರೆ ಮುಗಿಸಿ ಈಜಲು ಹೋದ ಯುವಕ ನೀರು ಪಾಲು

- Advertisement -
- Advertisement -

ಕಾರವಾರ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ಮುಂಡಗೋಡ ತಾಲೂಕಿನ ಧರ್ಮ ನದಿಯ ಮಳಗಿ ಜಲಾಶಯದಲ್ಲಿ ಘಟನೆ ಸಂಭವಿಸಿದೆ.

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಯುವಕ ವಿನಾಯಕ (25) ಸಾವನ್ನಪ್ಪಿದ್ದು, ಸ್ನೇಹಿತರೊಂದಿಗೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದಿದ್ದ ಎನ್ನಲಾಗಿದೆ.

ಜಾತ್ರೆ ಮುಗಿದ ಬಳಿಕ ತನ್ನ 6 ಸ್ನೇಹಿತರೊಂದಿಗೆ ಮಳಗಿ ಜಲಾಶಯಕ್ಕೆ ಬಂದಿದ್ದ ಯುವಕ ಜಲಾಶಯದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಈಜು ತಜ್ಞರು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!