Wednesday, May 15, 2024
Homeಕರಾವಳಿಕೊಣಾಜೆಯಲ್ಲಿ ಕಳ್ಳತನದ ಆರೋಪಿಯಿಂದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ

ಕೊಣಾಜೆಯಲ್ಲಿ ಕಳ್ಳತನದ ಆರೋಪಿಯಿಂದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ

spot_img
- Advertisement -
- Advertisement -

ಮಂಗಳೂರು : ಕಳ್ಳತನದ ಆರೋಪಿಯನ್ನು ಹಿಡಿಯಲು ತೆರಳಿದ ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಎಸ್ ಐ ಶರಣಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬೆಲೆಬಾಳುವ ವಾಚ್ ಕಳ್ಳತನದ ಆರೋಪಿ ಪಾವೂರಿನಲ್ಲಿ ಆತನ ಅತ್ತೆ ಮನೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದರು. ಕೃತ್ಯ ನಡೆಸಿದ ಆರೋಪಿ ಈ ಹಿಂದೆ ಕೂಡಾ ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಹಿಂದಿನ ಪ್ರಕರಣದಲ್ಲಿ ಬೆಲೆಬಾಳುವ ವಾಚ್ ನ್ನು ಅಂಗಡಿಯೊಂದಕ್ಕೆ ಮಾರಾಟ ಮಾಡಲು ತೆರಳಿದ್ದ ಮಾಹಿತಿಯನ್ನು ಅಂಗಡಿ ಮಾಲಿಕರು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಆಧಾರದಲ್ಲಿ ನಗರ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ತೆರಳಿದ್ದಾಗ ಬಂದರು ಠಾಣಾ ಪೊಲೀಸ್‌ ಸಿಬ್ಬಂದಿ ವಿನೋದ್‌ ಮತ್ತು ಪ್ರವೀಣ್‌ ಎಂಬವರಿಗೆ ಆರೋಪಿ ಹಲ್ಲೆ ಮಾಡಿ ವಿನೋದ್ ಅವರಿಗೆ ಚೂರಿಯಂತಹ ಆಯುಧದಿಂದ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ.

ಆ ಬಳಿಕ ಆತ ಪಾವೂರಿನ ಅತ್ತೆ ಮನೆಯಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಎಸ್ ಐ ಶರಣಪ್ಪ ಹಾಗೂ ಸಿಬ್ಬಂದಿ ಬುಧವಾರ ದಾಳಿ ಮಾಡಿದಾಗ ಆರೋಪಿ ಎಸ್ ಐ ಶರಣಪ್ಪ ಅವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಶರಣಪ್ಪ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

- Advertisement -
spot_img

Latest News

error: Content is protected !!