Thursday, June 4, 2026
Homeಕರಾವಳಿಉಡುಪಿತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ: ತರಚಿದ ಗಾಯದೊಂದಿಗೆ ಪಾರಾದ ಪೇಜಾವರ ಶ್ರೀ

ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ: ತರಚಿದ ಗಾಯದೊಂದಿಗೆ ಪಾರಾದ ಪೇಜಾವರ ಶ್ರೀ

- Advertisement -
- Advertisement -

ನವದೆಹಲಿ: ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತುಲಾಭಾರದ ವೇಳೆ ತಕ್ಕಡಿ ಹಗ್ಗ ಕಳಚಿ ಬಿದ್ದ ಘಟನೆ ನವದೆಹಲಿಯಲ್ಲಿ ನಡೆದಿದೆ.

ತಕ್ಕಡಿಯ ಹಗ್ಗ ಕಳಚಿ ಬಿದ್ದ ಕಾರಣ ಪೇಜಾವರ ಶ್ರೀಗಳ ತಲೆಯ ಮೇಲೆ ತಕ್ಕಡಿಯ ಸರಳು ಬಿದ್ದಿದ್ದು ತಲೆಗೆ ತರಚಿದ ಗಾಯದೊಂದಿಗೆ ಪಾರಾಗಿದ್ದಾರೆ.

ನವದೆಹಲಿ ಪ್ರವಾಸದಲ್ಲಿರುವ ಪೇಜಾವರ ಶ್ರೀ ದೆಹಲಿಯಲ್ಲಿರುವ ಪೇಜಾವರ ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಶ್ರೀಗಳಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೆಹಲಿಯ ಭಕ್ತರಿಂದ ಪ್ರಸನ್ನಾಭಿನಂದನಾ ಕಾರ್ಯಕ್ರಮ ಆಯೋಜಿಸಿ ತುಲಾಭಾರ ಏರ್ಪಡಿಸಲಾಗಿತ್ತು.

- Advertisement -

Latest News

error: Content is protected !!