Wednesday, July 15, 2026
Homeಕರಾವಳಿಉಡುಪಿಮೈಸೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗೆ ಪೇಜಾವರ ಶ್ರೀ ಚಾಲನೆ

ಮೈಸೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗೆ ಪೇಜಾವರ ಶ್ರೀ ಚಾಲನೆ

- Advertisement -
- Advertisement -

ಮೈಸೂರು: ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕೆಗೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು‌.

ಇಪ್ಪತ್ತೊಂದು ಪವಿತ್ರ ಕ್ಷೇತ್ರಗಳಿಂದ ತಂದಿರುವ ಮಣ್ಣು ಹಾಗು ಏಳು ಪವಿತ್ರ ನದಿಗಳ ತೀರ್ಥ ಬಳಸಿ ಶುದ್ದ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿ ತಯಾರಿಸುವ ಕಾರ್ಯಕ್ಕೆ ಶ್ರೀಗಳು ಚಾಲನೆ ನೀಡಿದರು.

ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಮಾಧವಕೃಪಾ ಆವರಣದಲ್ಲಿ ಚಾಲನಾ ಕಾರ್ಯಕ್ರಮ ನಡೆಯಿತು.ಇದೇ ವೇಳೆ, ಗಣೇಶೋತ್ಸವ ಸಮಿತಿಯ ಭಿತ್ತಿಪತ್ರವನ್ನು ಕೂಡಾ ಪೇಜಾವರ ಸ್ವಾಮೀಜಿ ಬಿಡುಗಡೆ ಮಾಡಿದರು. ‌

- Advertisement -

Latest News

error: Content is protected !!