Wednesday, June 24, 2026
Homeಕರಾವಳಿಉಡುಪಿಶೌಚಾಲಯದಲ್ಲಿ ವೀಡಿಯೋ ಪ್ರಕರಣದಲ್ಲಿ ಪ್ರಚೋದನಾಕಾರಿ  ಭಾಷಣ ಆರೋಪ:ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಗೆ ಜಾಮೀನು...

ಶೌಚಾಲಯದಲ್ಲಿ ವೀಡಿಯೋ ಪ್ರಕರಣದಲ್ಲಿ ಪ್ರಚೋದನಾಕಾರಿ  ಭಾಷಣ ಆರೋಪ:ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಗೆ ಜಾಮೀನು ಮಂಜೂರು

- Advertisement -
- Advertisement -

ಉಡುಪಿ: ನರ್ಸಿಂಗ್ ಕಾಲೇಜು ಶೌಚಾಲಯದಲ್ಲಿ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಜಾಮೀನು ಮಂಜೂರಾಗಿದೆ.ಪ್ರಚೋದನಾಕಾರಿ ಭಾಷಣ ಆರೋಪ ಪ್ರಕರಣದಲ್ಲಿ ಉಡುಪಿ ಜಿಲ್ಲಾ ನ್ಯಾಯಾಧೀಶರಿಂದ ಇಂದು ಜಾಮೀನು ಮಂಜೂರಾಗಿದೆ.

ಶೌಚಾಲಯದಲ್ಲಿ ವೀಡಿಯೋ ಪ್ರಕರಣ ಖಂಡಿಸಿ ಆಗಸ್ಟ್ 3 ರಂದು ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಶರಣ್ ಪಂಪ್ ವೆಲ್ ವಿರುದ್ಧ ಪ್ರಚೋದನಾಕಾರಿ ಭಾಷಣದ ಆರೋಪ ವ್ಯಕ್ತವಾಗಿತ್ತು.

ಸೌಟು ಹಿಡಿಯುವ ಕೈಯಲ್ಲಿ ತಾಯಂದಿರುವ ಕತ್ತಿ, ತಲವಾರು ಹಿಡಿಯುವಂತೆ ಪ್ರತಿಭಟನಾ ಭಾಷಣದಲ್ಲಿ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಶರಣ್ ಪಂಪ್ ವೆಲ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!