Thursday, June 4, 2026
Homeಉದ್ಯಮಕೊರೊನಾಗೆ ಪತಂಜಲಿಯಿಂದ ಆಯುರ್ವೇದ ಔಷಧಿ ಬಿಡುಗಡೆ: ಕಿಟ್​ನ ದರ 545 ರೂಪಾಯಿ

ಕೊರೊನಾಗೆ ಪತಂಜಲಿಯಿಂದ ಆಯುರ್ವೇದ ಔಷಧಿ ಬಿಡುಗಡೆ: ಕಿಟ್​ನ ದರ 545 ರೂಪಾಯಿ

- Advertisement -
- Advertisement -

ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಯೋಗ ಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಯೋಗ ಪೀಠ ಇಂದು ಔಷಧಿ ಬಿಡುಗಡೆ ಮಾಡಿದೆ.

ಕೊರೋನಾ ವೈರಸ್ ಚಿಕಿತ್ಸೆಗೆ ಇಂದು ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ಇಂದು ಔಷಧಿ ಬಿಡುಗಡೆಗೊಳಿಸಿದೆ. ಪತಂಜಲಿ ಬಿಡುಗಡೆಗೊಳಸಿರುವ ಔಷಧಿಗೆ ಕೊರೋನಿಲ್ ಎಂಬ ಹೆಸರು ನೀಡಲಾಗಿದ್ದು, ಕೊರೋನಾ ವೈರಸ್ ಚಿಕಿತ್ಸೆಗೆ ಇದು ಪ್ರಭಾವಶಾಲಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ಇದು ಕರೊನಾ ಚಿಕಿತ್ಸೆಗೆ ಲಭ್ಯವಾಗುತ್ತಿರುವ ಮೊಟ್ಟಮೊದಲ ಆಯುರ್ವೇದ ಔಷಧವಾಗಿದೆ. ನಿಯಂತ್ರಿತ ಕ್ಲಿನಿಕಲ್​ ಟ್ರಯಲ್​ ಬಳಿಕ ಈ ಔಷಧವನ್ನು ತಯಾರಿಸಲಾಗಿದೆ. ಪತಂಜಲಿ ಸಂಶೋಧನಾ ಕೇಂದ್ರ ಮತ್ತು ನಿಮ್ಸ್​ ಜಂಟಿಯಾಗಿ ಈ ಔಷಧವನ್ನು ಸಿದ್ಧಪಡಿಸಿವೆ. ಈ ಔಷಧವನ್ನು ಪಡೆಯುವ ಸೋಂಕಿತರು 3ರಿಂದ 7 ದಿನಗಳೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.

ಕರೊನಾ ಕಿಟ್​ 545 ರೂ. ದರದಲ್ಲಿ ಲಭ್ಯವಿದೆ. ಈ ಕಿಟ್​ನಲ್ಲಿನ ಔಷಧ 30 ದಿನಗಳವರೆಗೆ ಬರುತ್ತದೆ ಎಂದು ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದರು.

ಪತಂಜಲಿಯ ಕರೊನಾ ಕಿಟ್​ ಮುಕ್ತ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿಲ್ಲ. ಇನ್ನೊಂದು ವಾರದಲ್ಲಿ ಪತಂಜಲಿ ಸ್ಟೋರ್​ಗಳಲ್ಲಿ ಇದು ಲಭ್ಯವಾಗಲಿದೆ.

https://twitter.com/PypAyurved/status/1275339924871327745

- Advertisement -

Latest News

error: Content is protected !!