Wednesday, July 15, 2026
Homeಕರಾವಳಿಕೊರೊನ ಅಟ್ಟಹಾಸ : ಮಂಗಳೂರಿನಲ್ಲಿ 9 ನೇ ಬಲಿ

ಕೊರೊನ ಅಟ್ಟಹಾಸ : ಮಂಗಳೂರಿನಲ್ಲಿ 9 ನೇ ಬಲಿ

- Advertisement -
- Advertisement -

ಮಂಗಳೂರು :ದೇಶಾದ್ಯಂತ ತನ್ನ ಅಟ್ಟಹಾಸ ಮುಂದುವರೆಸಿರುವ ಮಹಾಮಾರಿ ಕೊರೊನಾ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ನೇ ಬಲಿ ಪಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 70 ವರ್ಷ ವೃದ್ದ ಸಾವನ್ನಪ್ಪಿದ್ದಾರೆ.

ಆರಂಭದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಸೋಂಕಿತರನ್ನು ಹೊಂದಿ ,ನಂತರ ಸುಧಾರಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಜೂನ್ 12 ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ SARI ಕೇಸ್ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 70 ವರ್ಷದ ವೃದ್ದರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರಿಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವೃದ್ದ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!