Friday, June 5, 2026
Homeತಾಜಾ ಸುದ್ದಿಇಂದು ಎರಡನೇ ವಿವಾಹವಾಗಲಿರುವ ಮುಖ್ಯಮಂತ್ರಿ

ಇಂದು ಎರಡನೇ ವಿವಾಹವಾಗಲಿರುವ ಮುಖ್ಯಮಂತ್ರಿ

- Advertisement -
- Advertisement -

ಪಂಜಾಬ್ : ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಇಂದು ಚಂಡೀಗಢದಲ್ಲಿ ಖಾಸಗಿ ಸಮಾರಂಭದಲ್ಲಿ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

48 ವರ್ಷದ ಭಗವಂತ್ ಮಾನ್ ಅವರಿಗೆ ಇದು 2ನೇ ಮದುವೆಯಾಗಲಿದ್ದು, ಡಾ ಗುರುಪ್ರೀತ್ ಕೌರ್ ಅವರನ್ನು ವರಿಸಲಿದ್ದಾರೆ.

ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಾನ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮದುವೆ ಸಮಾರಂಭದಲ್ಲಿ ಕುಟುಂಬದ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. 2015 ರಲ್ಲಿ ಭಗವಂತ್ ಮಾನ್ ತನ್ನ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್‌ನಿಂದ ವಿಚ್ಛೇದನಪಡೆದಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

- Advertisement -

Latest News

error: Content is protected !!