Saturday, May 18, 2024
Homeಕರಾವಳಿಉಕ್ಕಿ ಹರಿಯುತ್ತಿರುವ ಕುಮಾರಧಾರಾ- ನೇತ್ರಾವತಿ ನದಿಗಳು: ಉಪ್ಪಿನಂಗಡಿಯಲ್ಲಿ ನೆರೆ ಭೀತಿ

ಉಕ್ಕಿ ಹರಿಯುತ್ತಿರುವ ಕುಮಾರಧಾರಾ- ನೇತ್ರಾವತಿ ನದಿಗಳು: ಉಪ್ಪಿನಂಗಡಿಯಲ್ಲಿ ನೆರೆ ಭೀತಿ

spot_img
- Advertisement -
- Advertisement -

ಉಪ್ಪಿನಂಗಡಿ:  ಕುಮಾರಧಾರಾ- ನೇತ್ರಾವತಿ ನದಿಗಳು ನದಿಗಳು ಉಕ್ಕಿ ಹರಿಯುತ್ತಿದ್ದು ಉಪ್ಪಿನಂಗಡಿಯಲ್ಲಿ ನೆರೆ ಎದುರಾಗಿದೆ. ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದ್ದು ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

ಸಹಸ್ರಲಿಂಗೇಶ್ವರ-ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನಿನ್ನೆ ಸಂಜೆ ವೇಳೆಗೆ 6 ಮೆಟ್ಟಿಲುಗಳಷ್ಟೇ ಕಾಣಿಸುತ್ತಿದ್ದವು. ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ 29.0 ಮೀ. ನೀರಿನ ಪ್ರಮಾಣ ದಾಖಲಾಗಿದ್ದು, ಅಪಾಯದ ಮಟ್ಟ 30 ಮೀ. ಆಗಿದೆ.
ಪುತ್ತೂರು ತಹಶೀಲ್ದಾರ್‌ ನಿಸರ್ಗ ಪ್ರಿಯ ಉಪ್ಪಿನಂಗಡಿಗೆ ಆಗಮಿಸಿ, ಗೃಹ ರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್‌ ಬೋಟ್‌ನಲ್ಲಿ ಸಂಚರಿಸಿ ಬೋಟ್‌ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದರು.

- Advertisement -
spot_img

Latest News

error: Content is protected !!