Wednesday, June 24, 2026
Homeಕರಾವಳಿಉಡುಪಿಬ್ರಹ್ಮಾವರ ಕೊಕ್ಕರ್ಣೆಯಲ್ಲಿಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆ ಸಮಾವೇಶ

ಬ್ರಹ್ಮಾವರ ಕೊಕ್ಕರ್ಣೆಯಲ್ಲಿಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆ ಸಮಾವೇಶ

- Advertisement -
- Advertisement -

ಉಡುಪಿ: ಬ್ರಹ್ಮಾವರ ಕೊಕ್ಕರ್ಣೆಯಲ್ಲಿಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆ ಸಮಾವೇಶವು ನಡೆಯಿತು.

ಈ ವೇಳೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು,  “ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ‌ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ,” ಎಂದು ಹೇಳಿದರು.

ಅಷ್ಟೇಅಲ್ಲದೆ, ಭಾರತ ದೇಶದ ಬಜೆಟ್ ಗಾತ್ರ 48.50 ಲಕ್ಷ ಕೋಟಿ ರೂ. ಅದರಲ್ಲಿ ಎಷ್ಟು ಸೊನ್ನೆ ಇದೆಯೆಂದು ಮೋದಿಗೆ ಗೊತ್ತಿರಲಿಕ್ಕಿಲ್ಲ. ಇದರಲ್ಲಿ ಎರಡು ಲಕ್ಷ ರೂ‌. ಅನುದಾನವನ್ನು ಕೋಟ ಶ್ರೀನಿವಾಸ ಪೂಜಾರಿಗೆ  ಕೊಡಿಸಲು ಆಗುವುದಿಲ್ಲವೇ. 4 ಲಕ್ಷ ಕೋಟಿ ರೂ. ರಾಜ್ಯದ ಬಜೆಟ್ ಗಾತ್ರ. ಅದರಲ್ಲಿ ಎರಡು ಲಕ್ಷ ರೂ. ಅನುದಾನ ತರಲು ಉಡುಪಿ ಶಾಸಕರಿಗೆ ಆಗುವುದಿಲ್ಲವೇ?. ಹಾಗಿದ್ದರೆ ಇವರು ಯಾವ ಎಂಎಲ್ಎ. ಬಿಜೆಪಿಯ ಎಂಪಿ, ಎಂಎಲ್ಎಗಳು ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ಕೂಡ ಉಪಸ್ಥಿತರಿದ್ದರು.

- Advertisement -

Latest News

error: Content is protected !!