Sunday, May 19, 2024
Homeತಾಜಾ ಸುದ್ದಿಆಕಸ್ಮಿಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ ಪಾಕಿಸ್ತಾನದ 3 ವರ್ಷದ ಮಗು: ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು...

ಆಕಸ್ಮಿಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ ಪಾಕಿಸ್ತಾನದ 3 ವರ್ಷದ ಮಗು: ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ ಭಾರತೀಯ ಯೋಧರು

spot_img
- Advertisement -
- Advertisement -

ನವದೆಹಲಿ: ಆಕಸ್ಮಿಕವಾಗಿ ತಡರಾತ್ರಿ ಪಾಕಿಸ್ತಾನದ ಮೂರು ವರ್ಷದ ಮಗುವೊಂದು ಭಾರತದ ಗಡಿ ದಾಟಿ ಬಂದಿತ್ತು. ಮಗುವನ್ನು ಕಂಡ ಗಡಿ ಭದ್ರತಾ ಪಡೆ ಯೋಧರು ರಕ್ಷಿಸಿ ಪಾಕಿಸ್ತಾನಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಗುವನ್ನು ಕುಟುಂಬಸ್ಥರ ಮಡಿಲು ಸೇರಿಸಿದ್ದಾರೆ.

ಪಂಜಾಬ್‌ನ ಹೆಚ್ಚಿನ ಭಾಗ ಪಾಕಿಸ್ತಾನದ ಗಡಿಯನ್ನು ಹಂಚಿಕೊಂಡಿದೆ. ಇದರಿಂದಾಗಿ ಅನೇಕ ಪಾಕಿಸ್ತಾನಿಗಳು ತಪ್ಪಾಗಿ ಪಂಜಾಬ್‌ನೊಳಗೆ ಬಂದು ಭಾರತವನ್ನು ಪ್ರವೇಶಿಸುತ್ತಾರೆ. ಇದೇ ರೀತಿ, ನಿನ್ನೆ ತಡರಾತ್ರಿ ಮೂರು ವರ್ಷದ ಮಗು ಎಲ್​ಒಸಿ ದಾಟಿ ಭಾರತ ಪ್ರವೇಶಿಸಿದೆ. ರಾತ್ರಿ ವೇಳೆ ಗಡಿ ಪ್ರದೇಶದಲ್ಲಿ ಮಗು ಒಂಟಿಯಾಗಿ ನಡೆದು ಬರುತ್ತಿದ್ದಾಗ ಕರ್ತವ್ಯದಲ್ಲಿದ್ದ ಗಡಿ ರಕ್ಷಕರ ಕಣ್ಣಿಗೆ ಬಿದ್ದಿದೆ. ಕತ್ತಲಲ್ಲಿ ಬಂದ ಮಗುವನ್ನು ಎತ್ತಿಕೊಂಡು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

3 ವರ್ಷದ ಮಗುವಿಗೆ ತನ್ನ ಸ್ಥಳದ ಬಗ್ಗೆ ಅರಿವಿಲ್ಲದ ಕಾರಣ ಭಾರತೀಯ ಅಧಿಕಾರಿಗಳು ಪಾಕಿಸ್ತಾನಿ ರೇಂಜರ್‌ನೊಂದಿಗೆ ಸಂಪರ್ಕ ಸಾಧಿಸಿ ಮಗುವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ತಪ್ಪಿಸಿಕೊಂಡು ಬಂದ ಮಗುವಿನ ಕುಟುಂಬದ ಮಾಹಿತಿ ಕಲೆ ಹಾಕಿದ ಬಳಿಕ ಮರಳಿ ಮಗುವನ್ನು ಆ ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!