Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಪತ್ನಿಗೆ ಅನಾರೋಗ್ಯ ಸಮಸ್ಯೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪದ್ಮಶ್ರೀ ವಿಜೇತ  ಮಹಾಲಿಂಗ ನಾಯ್ಕ; ದಾನಿಗಳ...

ಮಂಗಳೂರು: ಪತ್ನಿಗೆ ಅನಾರೋಗ್ಯ ಸಮಸ್ಯೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪದ್ಮಶ್ರೀ ವಿಜೇತ  ಮಹಾಲಿಂಗ ನಾಯ್ಕ; ದಾನಿಗಳ ಸಹಾಯದ  ನಿರೀಕ್ಷೆಯಲ್ಲಿದ್ದಾರೆ ಆಧುನಿಕ ಭಗೀರಥ

- Advertisement -
- Advertisement -

ಮಂಗಳೂರು: ಆಧುನಿಕ ಭಗೀರಥ, ಪದ್ಮಶ್ರೀ ವಿಜೇತ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಮೈ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾಲಿಂಗ ನಾಯ್ಕ ಅವರ ಪತ್ನಿ ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದು, ಪತ್ನಿಯ ಆಸ್ಪತ್ರೆಯ ವೆಚ್ಚ ಭರಿಸಲಾರದೇ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಮಹಾಲಿಂಗ ನಾಯ್ಕ ಅವರ ಪತ್ನಿಯನ್ನು ಕಣ್ಣೂರು ಕೊಡಕ್ಕಲ್‌ನಲ್ಲಿರುವ ಫಸ್ಟ್ ನ್ಯೂರೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 2.65ಲಕ್ಷ ರೂ. ಚಿಕಿತ್ಸೆಯ ವೆಚ್ಚ ಭರಿಸಿದ್ದಾರೆ. ಇದೀಗ ಮತ್ತೆ ಚಿಕಿತ್ಸೆಯ ವೆಚ್ಚ 2.50ಲಕ್ಷ ರೂಪಾಯಿ ಭರಿಸಬೇಕಿದೆ. ಕೈಯಲ್ಲಿ ಬಿಡಿಗಾಸು ಇಲ್ಲದ ಅಮೈ ಮಹಾಲಿಂಗ ನಾಯ್ಕರು ಇದರಿಂದ ಕಂಗಾಲಾಗಿದ್ದಾರೆ. ದಾನಿಗಳು ಇವರ ಸಹಾಯಕ್ಕೆ ಧಾವಿಸಬೇಕಿದೆ..

ಬ್ಯಾಂಕ್ ಖಾತೆಯ ಮಾಹಿತಿ:

ಮಹಾಲಿಂಗ ನಾಯ್ಕ್

ಕೆನರಾ ಬ್ಯಾಂಕ್, ವಿಟ್ಲ

A/C No: 110037237088

IFSC Code: CNRB0010141

- Advertisement -

Latest News

error: Content is protected !!