Saturday, June 6, 2026
Homeಕರಾವಳಿಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ಕಟೀಲಿಗೆ ಪಾದಯಾತ್ರೆ ಹೊರಟ ಏಳು ಜನ ಯುವಕರ ತಂಡ

ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ಕಟೀಲಿಗೆ ಪಾದಯಾತ್ರೆ ಹೊರಟ ಏಳು ಜನ ಯುವಕರ ತಂಡ

- Advertisement -
- Advertisement -

ಮಂಗಳೂರು: ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಕೊರೊನಾ ಮಹಾಮಾರಿ ಸೋಂಕಿನಿಂದ ಮುಕ್ತಿ ಪಡೆಯಲು ಯುವಕರ ತಂಡವೊಂದು ಶ್ರೀಕ್ಷೇತ್ರ ಕಟೀಲಿಗೆ ಪಾದಯಾತ್ರೆ ಮಾಡಿದ್ದಾರೆ.

ಕೀರ್ತನ್, ಮೃಣಾಲ್ ಶೆಟ್ಟಿ, ಕೃತೇಶ್ ಭಂಡಾರಿ, ಕಿರಣ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸನತ್ ಹಾಗೂ ವಿಖ್ಯಾತ್ ಎಂಬ ಈ ಏಳು ಜನ ಯುವಕರ ತಂಡ ವಿಶಿಷ್ಟವಾಗಿ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡುವಂತೆ ಕಟೀಲು ಶ್ರೀ ಭ್ರಮರಾಂಭಿಕೆಯ ಮೊರೆ ಹೋಗಿದ್ದಾರೆ.

ನಿನ್ನೆ ಮುಂಜಾನೆ 4.15 ಕ್ಕೆ ನಗರದ ಕಾವೂರಿನಿಂದ ಪಾದಯಾತ್ರೆ ಬೆಳೆಸಿದ ತಂಡ ಬೆಳಗ್ಗೆ 7.50ರ ಸುಮಾರಿಗೆ ಕಟೀಲು ದೇಗುಲ ತಲುಪಿದ್ದಾರೆ. ಅಲ್ಲಿ ದೇವಿಯ ದರ್ಶನ ಪಡೆದ ಯುವಕರು, ಕೊರೊನಾ ಸೋಂಕಿನಿಂದ ಜಗತ್ತನ್ನು ಕಾಪಾಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಯುವಕರ ತಂಡದ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

- Advertisement -

Latest News

error: Content is protected !!