Monday, June 8, 2026
Homeಕ್ರೀಡೆರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಮಿಂಚಿದ ಆರ್ಕಿಡ್ಸ್ ವಿದ್ಯಾರ್ಥಿಗಳು

ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಮಿಂಚಿದ ಆರ್ಕಿಡ್ಸ್ ವಿದ್ಯಾರ್ಥಿಗಳು

- Advertisement -
- Advertisement -

ಸಹಕಾರನಗರ ಶಾಖೆಯ ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಹಾಗೂ 8ನೇ ತರಗತಿಯ ಅಗಸ್ತ್ಯ ಮಂಜುನಾಥ್ ಅವರು ಸಿ.ಐ.ಎಸ್.ಸಿ.ಇ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ವೈಯುಕ್ತಿಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಟೇಕ್ವಾಂಡೋ 55-59 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಶ್ರೇಯಸ್ ಮೊದಲ ಸ್ಥಾನ ಗಳಿಸಿ ಗಳಿಸಿದರೆ, ಅಗಸ್ತ್ಯ ಮಂಜುನಾಥ್ ಈಜು ಸ್ಪರ್ಧೆಯ ಫ್ರೀಸ್ಟೈಲ್ ಅಂಡರ್ 14 ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ.

ಈರ್ವರು ವಿದ್ಯಾರ್ಥಿಗಳು ಮುಂದೆ ಡಿಸೆಂಬರ್ ನಲ್ಲಿ ಜರುಗಲಿರುವ, ಸ್ಕೂಲ್ಸ್ ಗೇಮ್ ಫೆಡರೇಶನ್ ಆಫ್ ಇಂಡಿಯಾದ, 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಐ.ಸಿ.ಎಸ್.ಇ ಯನ್ನು ಪ್ರತಿನಿಧಿಸಲಿದ್ದಾರೆ.

- Advertisement -

Latest News

error: Content is protected !!