Sunday, May 26, 2024
Homeಕರಾವಳಿ75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಆನ್‌ಲೈನ್‌ ದೇಶಭಕ್ತಿ ಗೀತೆ ಸ್ಪರ್ಧೆ:5000 ಮಂದಿ ಭಾಗವಹಿಸುವ ಮೂಲಕ ಗೋಲ್ಡನ್...

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಆನ್‌ಲೈನ್‌ ದೇಶಭಕ್ತಿ ಗೀತೆ ಸ್ಪರ್ಧೆ:5000 ಮಂದಿ ಭಾಗವಹಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ

spot_img
- Advertisement -
- Advertisement -

ಬೆಳ್ತಂಗಡಿ: ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ದೇಶ ಭಕ್ತಿ ಗೀತೆಯಲ್ಲಿ ಬೆಳ್ತಂಗಡಿ ತಾಲೂಕಿನ 3500 ಮಂದಿಯಲ್ಲದೆ ಹೊರ ತಾಲೂಕು, ಜಿಲ್ಲೆ, ದೇಶ, ವಿದೇಶಗಳಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸುವ ಮೂಲಕ ಸ್ವಾತಂತ್ರೋತ್ಸವದ ಅಂಗವಾಗಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ನಡೆದ ಸ್ಪರ್ಧೆ ಸದ್ಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ.

ಈ ದಾಖಲೆ ನಿರ್ಮಾಣದ ಬಗ್ಗೆ ಸರ್ಟಿಫೀಕೆಟ್ ಹಸ್ತಾಂತರ ಕಾರ್ಯಕ್ರಮವು ಆ.15ರಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾಂಗಣದಲ್ಲಿ ನಡೆದಿದ್ದು,ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಇದರ ಏಷ್ಯಾದ ಮುಖ್ಯಸ್ಥ ಡಾ. ಮನಿಷ್ ವೈಷ್ಣವಿ ಡೆಲ್ಲಿ ಅವರು ಶಾಸಕ ಹರೀಶ್ ಪೂಂಜ ಅವರಿಗೆ ಸರ್ಟೀಫೀಕೆಟ್‌ನ್ನು ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಶಾಸಕರು, ಇದು ನನ್ನ ಒಬ್ಬನ ಸಾಧನೆಯಲ್ಲ, ಇದು ತಾಲೂಕಿನ ಜನರ ಸಾಧನೆ.ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕು ಅಲ್ಲದೆ, ದೇಶ, ವಿದೇಶಗಳಿಂದ ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಆಗಿದೆ ಎಂದರು.

ಡಾ. ಮನೀಷ್ ಅವರು ಮಾತನಾಡಿ ತಾನು ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸುತ್ತಿದ್ದೇನೆ. ಶಾಸಕರ ನೇತೃತ್ವದಲ್ಲಿ ನಡೆದ ಆನ್‌ಲೈನ್ ದೇಶ ಭಕ್ತಿ ಗೀತೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಿರ್ಮಿಸಿದೆ. ಈ ಹಿಂದೆ 1 ಸಾವಿರ ಮಂದಿ ಹಾಡಿದ ದೇಶ ಭಕ್ತಿ ಗೀತೆ ವರ್ಲ್ಡ್ ರೆಕಾರ್ಡ್ ಆಗಿತ್ತು. ಈ ಬಾರಿ ಸುಮಾರು 5 ಸಾವಿರ ಮಂದಿ ಹಾಡಿರುವುದು ಈ ದಾಖಲೆಯನ್ನು ನಿರ್ಮಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತು ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿ, ಅನಿಷ್ ಅಮೀನ್ ಧನ್ಯವಾದವಿತ್ತರು.

- Advertisement -
spot_img

Latest News

error: Content is protected !!