Monday, June 17, 2024
Homeಕರಾವಳಿಮಂಗಳೂರು; ಕೌಂಪೌಂಡ್ ಗೋಡೆ ಕುಸಿದು ಎರಡು ಕಾರುಗಳು ಜಖಂ

ಮಂಗಳೂರು; ಕೌಂಪೌಂಡ್ ಗೋಡೆ ಕುಸಿದು ಎರಡು ಕಾರುಗಳು ಜಖಂ

spot_img
- Advertisement -
- Advertisement -

ಮಂಗಳೂರು; ಕೌಂಪೌಂಡ್ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿರುವ ಘಟನೆ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿ ಮರದ ಮಿಲ್‌ನ ಬಳಿ ನಡೆದಿದೆ.

 ಯೇನೆಪೋಯ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳದ ಕುಟುಂಬವೊಂದು ಆವರಣ ಗೋಡೆ ಪಕ್ಕ ಕಾರು ನಿಲ್ಲಿಸಿದ್ದರು. ಈ ವೇಳೆ ಮಳೆಯಿಂದಾಗಿ ಒದ್ದೆಯಾಗಿ ಹೋಗಿದ್ದ ಕಾಂಪೌಂಡ್ ಗೋಡೆ ಕುಸಿದಿದೆ. ಪರಿಣಾಮ ಕಾಂಪೌಂಡ್ ಗೋಡೆಯ ಕೆಂಪುಕಲ್ಲುಗಳಡಿ ಸಿಲುಕಿ ಕಾರುಗಳ ಗಾಜುಗಳು ನಜ್ಜುಗುಜ್ಜಾಗಿವೆ.

ಸ್ಥಳದಲ್ಲಿದ್ದ ಬೇಲ್‍ಪುರಿ ಮಾರಾಟದ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಗೊಂಡಿದೆ. ಬೇಲ್‍ಪುರಿ ಮಾರುವವ ಎರಡು ದಿನಗಳ ಹಿಂದೆ ಸ್ಥಳಕ್ಕೆ ₹ 15 ಸಾವಿರ ಪಾವತಿ ಮಾಡಿ ಆವರಣ ಗೋಡೆ ಪಕ್ಕದಲ್ಲಿ ಕೈಗಾಡಿಯನ್ನು ನಿಲ್ಲಿಸಿದ್ದ. ಆ ಕೈಗಾಡಿ ಕಲ್ಲುಗಳ ಅಡಿ ಸಿಲುಕಿ ಅಪ್ಪಚ್ಚಿಯಾಗಿದೆ.

- Advertisement -
spot_img

Latest News

error: Content is protected !!