Saturday, June 13, 2026
Homeಕರಾವಳಿಕೆದಿಲ: ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ!

ಕೆದಿಲ: ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ!

- Advertisement -
- Advertisement -

ಬಂಟ್ವಾಳ : ಕೆದಿಲ ಗ್ರಾಮದ ಗಾಂಧಿನಗರದಲ್ಲಿರುವ ಪಾಂಚಜನ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು, ಧ್ವಜಾರೋಹಣವನ್ನು ಕೆದಿಲ ಉಳ್ಳಾಕುಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜೆ. ಕೃಷ್ಣ ಭಟ್ ಮಿರಾವನ ನೆರವೇರಿಸಿದರು.

ಜನರನ್ನು ಉದ್ಧೇಶಿಸಿ ಸ್ವಾತಂತ್ರ್ಯದ ಬಗ್ಗೆ ಮಾತುಗಳನ್ನು ಆಡಿದ್ದು ಬಳಿಕ ಕೆನರಾ ಬ್ಯಾಂಕ್ ಮೆನೇಜರ್ ಸಾಂದರ್ಭಿಕ ಮಾತುಗಳನ್ನಾಡಿದರು. ನಿವೃತ ಶಿಕ್ಷಕ, ಶ್ರೀ ದೇವಿ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಪ್ರಗತಿ ವಳಂಗಜೆ ವಂದನಾರ್ಪಣೆ ಗೈದರು.

ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಜಯಂತಿ ಡಿ ಶೆಟ್ಟಿ, ಉಪಾಧ್ಯಕ್ಷ ಉಮೇಶ್ ಮುರುವ, ಪಾಂಚಜನ್ಯದ ಮಾಲಿಕ ಶ್ಯಾಮ್ ಪ್ರಸಾದ್ ಒ. ಪುಂಚತೋಡಿ, ನಿವೃತ ಬ್ಯಾಂಕ್ ಉದ್ಯೋಗಿ ಪರಮೇಶ್ವರ ನಾವುಡ ಹಾಗು ಬ್ಯಾಂಕ್ ಸಿಬ್ಬಂದ್ಧಿ, ಹಾಗು ಪಂಚಾಯತ್ ಸದಸ್ಯರು, ಊರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!