Saturday, December 14, 2024
Homeಇತರಆನ್​ಲೈನ್​ನಲ್ಲೇ ಮದುವೆ!ಧಾರವಾಡದ ವರ ಕೊಪ್ಪಳದ ವಧು

ಆನ್​ಲೈನ್​ನಲ್ಲೇ ಮದುವೆ!ಧಾರವಾಡದ ವರ ಕೊಪ್ಪಳದ ವಧು

spot_img
- Advertisement -
- Advertisement -

ಧಾರವಾಡ, ಎ.22: ಕೊರೋನ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರ ಪರಿಣಾಮ ನೂತನ ದಂಪತಿಗಳು ಆನ್‍ಲೈನ್‍ನಲ್ಲಿಯೇ ಮದುವೆಯಾದ ಅಪರೂಪದ ಪ್ರಸಂಗವೊಂದು ನಡೆದಿದೆ.

ಧಾರವಾಡದ ಆದರ್ಶ ನಗರದ ಇಮ್ರಾನ್ ನದಾಫ್ ಹಾಗೂ ಕೊಪ್ಪಳದ ತಾಜುಮಾ ಬೇಗಂ ಮದುವೆ ಎ.19ಕ್ಕೆ ನಿಗದಿಯಾಗಿತ್ತು. ಆದರೆ, ಲಾಕ್‍ಡೌನ್ ಘೋಷಣೆಯಾದ್ದರಿಂದ ನಿಗದಿತ ದಿನದಂದೇ ಆನ್‍ಲೈನ್‍ನಲ್ಲೇ ವಿಡಿಯೋ ಕಾಲ್ ಮೂಲಕ ಮದುವೆಯಾಗಿದ್ದು, ತಡವಾಗಿ ವರದಿಯಾಗಿದೆ.

ವರನ ಸ್ವಗೃಹ ಹಾಗೂ ವಧುವಿನ ಸ್ವಗೃಹದಲ್ಲಿ ಲ್ಯಾಪ್‍ಟಾಪ್ ಇಟ್ಟು ಎರಡೂ ಕುಟುಂಬದ ಸದಸ್ಯರು ಮಾಸ್ಕ್ ಹಾಕಿಕೊಂಡು ಸಂಪ್ರದಾಯ ನೆರವೇರಿಸಿದ್ದು ವಿಶೇಷವಾಗಿತ್ತು.

“ಜನವರಿಯಲ್ಲಿ ಇವರ ನಿಶ್ಚಿತಾರ್ಥವಾಗಿತ್ತು. ಮದುವೆಗೆ 4 ಜನರು ಮಾತ್ರ ತೆರಳಲು ಪರವಾನಿಗೆ ನೀಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಹೀಗಾಗಿ, ಆನ್‍ಲೈನ್ ಮೂಲಕ ಸರಳವಾಗಿ ಮದುವೆಯಾಗಿದ್ದೇವೆ. ಕೊಪ್ಪಳದಲ್ಲಿರುವ ಪತ್ನಿಯನ್ನು ಲಾಕ್‍ಡೌನ್ ನಂತರದಲ್ಲಿ ಕರೆದುಕೊಂಡು ಬರಲಾಗುವುದು” ಎಂದು ವರ ಇಮ್ರಾನ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!