Monday, May 6, 2024
Homeಕರಾವಳಿಪುತ್ತೂರು; ಸರ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ; ಕೊನೆಗೆ ಸರ ಸಿಕ್ಕಿದ್ದೆಲ್ಲಿ ಗೊತ್ತಾ?

ಪುತ್ತೂರು; ಸರ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ; ಕೊನೆಗೆ ಸರ ಸಿಕ್ಕಿದ್ದೆಲ್ಲಿ ಗೊತ್ತಾ?

spot_img
- Advertisement -
- Advertisement -

ಪುತ್ತೂರು: ವೃದ್ಧೆಯೊಬ್ಬರು ಸರ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಸರ ಮನೆಯಲ್ಲಿಯೇ ಪತ್ತೆಯಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ಸಮೀಪವಿರುವ ದರ್ಬೆ ಆಸ್ಪತ್ರೆಯ ಬಳಿ ಮನೆಯೊಂದರಲ್ಲಿ ನಿವೃತ್ತ ವೃದ್ದ ಶಿಕ್ಷಕಿಯರಿಬ್ಬರು ವಾಸ ಮಾಡುತ್ತಿದ್ದರು. ಇವರಿಬ್ಬರನ್ನು ಹೊರತು ಪಡಿಸಿ ಅಲ್ಲಿಗೆ ಪ್ರತಿದಿನ ಕೆಲಸದಾಳು ಬಂದು ತನ್ನ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಳು. ಆದರೆ ಕಳೆದ ಎರಡು ದಿನಗಳ ಹಿಂದೆ ಕಪಾಟಿನಲ್ಲಿಟ್ಟಿದ್ದ ಚಿನ್ನದ ಸರ ಕಾಣೆಯಾಗಿತ್ತು. ಗಾಬರಿಯಾದ ಇಬ್ಬರು ವೃದ್ದೆಯರು ಮತ್ತು ಕೆಲಸದಾಳು ಸೇರಿ ಮನೆಯಲ್ಲೆಲ್ಲಾ ಇಡೀ ದಿನ ಹುಡುಕಾಡಿದರೂ ಚಿನ್ನದ ಸರ ಪತ್ತೆಯಾಗಿರಲಿಲ್ಲ.

ಕೊನೆಗೆ ಮಾರನೇ ದಿನ ಇಡೀ ಮನೆಯನ್ನೇ ಗುಡಿಸಿ ಹುಡುಕುವ ಕೊನೆಯ ಪ್ರಯತ್ನ ಮಾಡಲಾಯಿತು.ಆದರೂ ಯಾವುದೇ ಪ್ರಯೋಜನವಾಗಲಿಲ್ಲ.ಕೊನೆಗೆ ವೃದ್ದೆಯರಿಬ್ಬರು ಸಮಾಜ ಸೇವಕರೋರ್ವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಮನೆಗೆ ಬಂದ ಸಮಾಜ ಸೇವಕರು ಹುಡುಕಾಟ ನಡೆಸಿದರೂ ಚಿನ್ನದ ಸರ ಸಿಗಲಿಲ್ಲ.ಕೊನೆಗೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ . ಆಗ ಮನೆಯ ಕೆಲಸದಾಳು ಬೆಡ್‌ರೂಂನ ತಲೆದಿಂಬಿನಡಿಯಲ್ಲಿ ಇತ್ತು ಎಂದು ಚಿನ್ನದ ಸರವನ್ನು ವೃದ್ಧೆಯ ಕೈಗಿತ್ತಿದ್ದಾರೆ. ಸತತ ಎರಡು ದಿನಗಳಿಂದ ನಿರಂತರ ಹುಟುಕಾಟ ನಡೆಸಿ ಸಿಗದ ಚಿನ್ನದ ಸರ ದಿಡೀರ್ ಹೇಗೆ ತಲೆದಿಂಬಿನಡಿಯಲ್ಲಿ ಪ್ರತ್ಯಕ್ಷವಾಯಿತು ಎಂಬುವುದೇ ಹಲವು ಕುತೂಹಲಕ್ಕೆ ಕಾರಣವಾಗಿದೆ.ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!