Sunday, May 19, 2024
Homeಕರಾವಳಿಆ್ಯಂಟಿ‌ ಕಮ್ಯುನಲ್ ವಿಂಗ್ ರಚಿಸಿ ಮಂಗಳೂರು ‌ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಆದೇಶ

ಆ್ಯಂಟಿ‌ ಕಮ್ಯುನಲ್ ವಿಂಗ್ ರಚಿಸಿ ಮಂಗಳೂರು ‌ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಆದೇಶ

spot_img
- Advertisement -
- Advertisement -

ಮಂಗಳೂರಿನಲ್ಲಿ ಆ್ಯಂಟಿ‌ ಕಮ್ಯುನಲ್ ವಿಂಗ್ ರಚಿಸಿ ಮಂಗಳೂರು ‌ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರು ಆದೇಶ ಹೊರಡಿಸಿದ್ದಾರೆ. ಈ ವಿಂಗ್ ಮೂಲಕ ನೈತಿಕ ಪೊಲೀಸ್ ಗಿರಿ ಮತ್ತು ಕೋಮು ಗಲಭೆ ಹತ್ತಿಕ್ಕಲು ಸಹಾಯವಾಗಲಿದೆ.

ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಗೃಹಸಚಿವ ಡಾ ಜಿ. ಪರಮೇಶ್ವರ್ ಆ್ಯಂಟಿ‌ ಕಮ್ಯುನಲ್ ವಿಂಗ್ ರಚನೆ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಅಸ್ತಿತ್ವಕ್ಕೆ ಬಂದಿದೆ. ನಗರದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಿದೆ. ನೈತಿಕ ಪೊಲೀಸ್‌ ಗಿರಿ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಕ್ಷಿಪ್ರ ಕಾರ್ಯಚರಣೆಗಾಗಿ ವಿಂಗ್ ರಚನೆ ಮಾಡಲಾಗಿದೆ ಅಂತ ಕುಲದೀಪ್ ಜೈನ್ ತಿಳಿಸಿದ್ದಾರೆ.

ಮಂಗಳೂರು ನಗರದ ಸಿಸಿಬಿ ಎಸಿಪಿ ಉಸ್ತುವಾರಿಯಲ್ಲಿ “ಆ್ಯಂಟಿ‌ ಕಮ್ಯುನಲ್ ವಿಂಗ್” ತಂಡ ರಚನೆ ಮಾಡಲಾಗಿದ್ದು, ನಗರದಲ್ಲಿ ನಡೆಯಬಹುದಾದ ನೈತಿಕ ಪೊಲೀಸ್‌ಗಿರಿ ಸಮಸ್ಯೆಯನ್ನು ನಿಭಾಯಿಸುವುದು ಇದರ ಕರ್ತವ್ಯವಾಗಿದೆ. ಈ ಹಿಂದೆ ವರದಿಯಾಗಿರುವ ಕೋಮು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಕೊಲೆ, ಕೊಲೆ ಪ್ರಯತ್ನ, ದೊಂಬಿ ಪ್ರಕರಣಗಳು. ನೈತಿಕ ಪೊಲೀಸ್‌ಗಿರಿ ಮತ್ತು ಗೋವುಗಳ ಕಳ್ಳತನ, ಅಕ್ರಮ ಗೋ-ಸಾಗಾಟ, ಗೋ-ವಧೆ ಮುಂತಾದ ಪ್ರಕರಣಗಳನ್ನು ಈ ವಿಂಗ್‌ ಪರಿಶೀಲನೆ ನಡೆಸಲಿದೆ. ಅವುಗಳಲ್ಲಿನ ಆರೋಪಿತರುಗಳ ಚಲನವಲನಗಳ ಬಗ್ಗೆ ಪ್ರತಿನಿತ್ಯ ನಿಗಾವಹಿಸುವುದು. ಅವರುಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಮುಚ್ಚಳಿಕೆ ಪಡೆದುಕೊಳ್ಳುವುದು. ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತಿರುವ ಎಲ್ಲಾ ಸಂಘಟನೆಗಳ ಬಗ್ಗೆ ಮಾಹಿತಿಯನ್ನ ಆ್ಯಂಟಿ‌ ಕಮ್ಯುನಲ್ ವಿಂಗ್ ಸಂಗ್ರಹ ಮಾಡಲಿದೆ ಅಂತ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!