Thursday, May 2, 2024
Homeಕರಾವಳಿಬೆಳ್ತಂಗಡಿ; ನಿರಂತರವಾಗಿ ಕಪಿಲೆಯ ಒಡಲು ಸೇರುತ್ತಿದೆ  ಕೋಳಿ ತ್ಯಾಜ್ಯ; ಕಪಿಲೆಯ ರಕ್ಷಣೆಗೆ ಪರಿಸರ ಪ್ರೇಮಿಗಳ ಆಗ್ರಹ

ಬೆಳ್ತಂಗಡಿ; ನಿರಂತರವಾಗಿ ಕಪಿಲೆಯ ಒಡಲು ಸೇರುತ್ತಿದೆ  ಕೋಳಿ ತ್ಯಾಜ್ಯ; ಕಪಿಲೆಯ ರಕ್ಷಣೆಗೆ ಪರಿಸರ ಪ್ರೇಮಿಗಳ ಆಗ್ರಹ

spot_img
- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಶಿಶಿಲ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶ. ಇಲ್ಲಿರುವ ಕಪಿಲಾ ನದಿ ನಿತ್ಯ ಹರಿದ್ವರ್ಣ  ಪ್ರದೇಶದಿಂದ ಹರಿಯುತ್ತಿದ್ದಾಳೆ, ಸಾವಿರಾರು ಮತ್ಸ್ಯ ದೇವರ ಮೀನುಗಳಿಗೆ ಆಶ್ರಯ ನೀಡುತ್ತಿದ್ದಾಳೆ.

ಕಪಿಲಾ ನದಿಯ ತಟದಲ್ಲಿ ಪ್ರಖ್ಯಾತ ಶಿಶಿಲೆಶ್ವರ ದೇವಾಲಯ ಇದೆ. ಇಲ್ಲಿಯ ಜಲದಿಂದಲೆ ದೇವರಿಗೆ ‌ನಿತ್ಯ ಅಭಿಷೇಕ ನಡೆಯುತ್ತಿದೆ. ಸಾವಿರಾರು ಭಕ್ತರು ಈ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದಾರೆ. ಮಾತ್ರವಲ್ಲ ಈ ನೀರು ಕೃಷಿ, ಕುಡಿಯಲು ನಿತ್ಯ ಬಳಸುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಈ ನದಿಗೆ ದಿನ ನಿತ್ಯ ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವುದು ಪರಿಸರ ಪ್ರಿಯರಿಗೆ ಆತಂಕವಾಗಿದೆ. ಇದರಿಂದ ಸುತ್ತ ಮುತ್ತಲಿನ‌ ಪ್ರದೇಶದಲ್ಲಿ ದುರ್ಗಂಧ ಹೊರಹೊಮ್ಮಿ ವಾತಾವರಣ ಹಾಳಾಗುತ್ತಿದೆ.

ಆದ್ದರಿಂದ ಸಂಭವಿಸಿದ ಅಧಿಕಾರಿಗಳು, ಗ್ರಾಮ ಪಂಚಾಯತ್ , ತಾಲೂಕು ಆಡಳಿತ ಕೂಡಲೆ ಮದ್ಯ ಪ್ರವೇಶಿಸಿ ಅಂತಹ ವ್ಯಕ್ತಿಗಳ ಸೂಕ್ತ‌ ಕಾನೂನು ಕ್ರಮ ಜರಗಿಸುವಂತೆ ಶಿಶಿಲದ ಪ್ರಜ್ಞಾವಂತ ಪರಿಸರ ಪ್ರೇಮಿಗಳು, ನಾಗರಿಕರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!