Sunday, June 28, 2026
HomeUncategorizedನ. 1 ರಂದು ಪ್ರತಿ ಮನೆಗಳಲ್ಲೂ ಕನ್ನಡದ ಬಾವುಟ ಹಾರಿಸಿ; ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ...

ನ. 1 ರಂದು ಪ್ರತಿ ಮನೆಗಳಲ್ಲೂ ಕನ್ನಡದ ಬಾವುಟ ಹಾರಿಸಿ; ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಕರೆ

- Advertisement -
- Advertisement -

ಬೆಂಗಳೂರು : ನ. 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪ್ರತಿ ಮನೆಗಳಲ್ಲಿ ಕನ್ನಡದ ಬಾವುಟ ಹಾರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಕರೆ ಕೊಟ್ಟಿದ್ದಾರೆ.

ಕನ್ನಡದ ಕಣ್ವ ಖ್ಯಾತಿಯ ಬಿ.ಎಂ.ಶ್ರೀಕಂಠಯ್ಯನವರು ರಚಿಸಿದ ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಎನ್ನುವಂತೆ ಈ ಬಾರಿ ಅರ್ಥಪೂರ್ಣವಾಗಿ ಕನ್ನಡ ಪ್ರೇಮ ಮೆರೆಯೋಣ, ಈ ಬಾರಿ ಕನ್ನಡ ರಾಜ್ಯೋತ್ಸವ ದಂದು ಪ್ರತಿ ಮನೆಗಳ ಮೇಲೆ ಕನ್ನಡಧ್ವಜ ಹಾರಿಸೋಣ ಎಂದಿದ್ದಾರೆ.

ನ.1ರಂದು ನಾಡಿನಾದ್ಯಂತ ಎಲ್ಲೆಡೆಯೂ ಹಳದಿ ಕೆಂಪು ಬಣ್ಣವು ರಾರಾಜಿಸಲಿ. ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.

- Advertisement -

Latest News

error: Content is protected !!